ಎಂ.ಎ. ಲಾರೆನ್ಸ್‌ರ ಮೃತದೇಹ ಮೆಡಿಕಲ್ ಕಾಲೇಜಿಗೆ
ಕೊಚ್ಚಿ: ಸಿಪಿಎಂನ ಹಿರಿಯ ಮುಖಂಡ ಎಂ.ಎ. ಲೋರೆನ್ಸ್‌ರ ಮೃತದೇಹವನ್ನು ಧಾರ್ಮಿಕ ಆಚರಣೆ ಪ್ರಕಾರ ಸಂಸ್ಕರಿಸಲು ಅನುಮತಿ ನೀಡಬೇಕೆಂದು ಆಗ್ರಹಿಸಿ ಹೈಕೋರ್ಟ್‌ಗೆ ನೀಡಿದ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಪುತ್ರಿ ಆಶಾ ಲೋರೆನ್ಸ್ ನೀಡಿದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಜಸ್ಟೀಸ್ ವಿಜಿ ಅರುಣ್ ಅಧ್ಯಕ್ಷರಾಗಿರುವ ಸಿಂಗಲ್ ಬೆಂಚ್ ತೀರ್ಪು ನೀಡಿದೆ. ಇದರಿಂದ ಮೃತದೇಹವನ್ನು ಅಧ್ಯಯನದ ಅಗತ್ಯಕ್ಕಾಗಿ ಮೆಡಿಕಲ್ ಕಾಲೇಜಿಗೆ ನೀಡಲಾಗುವುದು. ಮೃತದೇಹವನ್ನು ಅಧ್ಯಯನ ಅಗತ್ಯಕ್ಕಾಗಿ ಕಳಮಶ್ಶೇರಿಯ ಮೆಡಿಕಲ್ ಕಾಲೇಜಿಗೆ ನೀಡಲು ತೀರ್ಮಾನಿಸಲಾಗಿದೆ.