ಹೊಳೆಯಿಂದ ಅನಧಿಕೃತ ಹೊಯ್ಗೆ ಸಾಗಾಟ: ಮೂರು ಮಂದಿ ಸೆರೆ

ಕುಂಬಳೆ: ಹೊಳೆಗಳಿಂದ ಅನಧಿಕೃತ ವಾಗಿ ಹೊಯ್ಗೆ ಸಾಗಾಟ ನಡೆಸಿದ ಪ್ರಕರ ಣಕ್ಕೆ ಸಂಬಂಧಿಸಿ ಮೂರು ಮಂದಿ ಯನ್ನು ಪೊಲೀಸರು ಸೆರೆಹಿಡಿದಿದ್ದಾರೆ.

ಇಚ್ಲಂಗೋಡು ಇಶಾನ ಮಂಜಿಲ್‌ನ ಮೊಹಮ್ಮದ್ ಫಾರೂಕ್ (52), ಇಚ್ಲಂಗೋಡಿನ ಅಬ್ದುಲ್ ಬಶೀರ್ (48), ಕುಡಾಲ್‌ಮೇರ್ಕಳದ ಮೊಹಮ್ಮದ್ ಅಲಿ (47) ಎಂಬಿವರನ್ನು ಕುಂಬಳೆ ಇನ್‌ಸ್ಪೆಕ್ಟರ್ ಬೈಜು ಕೆ. ಜೋಸ್, ಎಸ್‌ಐಗಳಾದ ಕೆ. ಸನಿತ್, ಅನಂತಕೃಷ್ಣನ್ ಆರ್ ಮೆನೋನ್ ನೇತೃತ್ವದಲ್ಲಿ ಸೆರೆಹಿಡಿಯಲಾಗಿದೆ.

ಶಿರಿಯ ಹೊಳೆ ಇಚ್ಲಂಗೋಡಿ ನಿಂದ ಇತ್ತೀಚೆಗೆ ಅನಧಿಕೃತವಾಗಿ ಹೊಯ್ಗೆ ಸಾಗಿಸಿದ ಪ್ರಕರಣದಲ್ಲಿ ಲಾರಿ ಚಾಲಕನ ಸಹಿತ ಒಟ್ಟು 7 ಮಂದಿ ವಿರುದ್ಧ ಪೊಲೀಸರು ಕೇಸು  ದಾಖಲಿಸಿಕೊಂಡಿದ್ದರು. ಆದರೆ ಅಂದು ಯಾರನ್ನೂ ಸೆರೆಹಿಡಿಯಲು ಸಾಧ್ಯವಾಗಿ ರಲಿಲ್ಲ. ಆರೋಪಿಗಳ ಪೈಕಿ    ಮೊಹ ಮ್ಮದ್ ಫಾರೂಕ್ ಹಾಗೂ ಅಬ್ದುಲ್ ಬಶೀರ್ ಎಂಬಿವರು  ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್‌ನ್ನು ಸಮೀಪಿಸಿದ್ದರೂ ಜಾಮೀನು ಲಭಿಸಿರಲಿಲ್ಲ. ಈ ಮಧ್ಯೆ ಇವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಸೆರೆಗೀಡಾದ ಮೊಹಮ್ಮದ್‌ಅಲಿ ಮಂಡೆಕಾಪಿನಿಂದ ಹೊಯ್ಗೆ ಸಾಗಿಸಿದ ಪ್ರಕರಣದ ಆರೋಪಿಯಾಗಿದ್ದಾನೆ. ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದ ವೇಳ ಈತ  ಓಡಿ ಪರಾರಿಯಾಗಿದ್ದನೆಂದು ಹೇಳಲಾ ಗುತ್ತಿದೆ. ಬಂಧಿತರನ್ನು ಇಂದು ನ್ಯಾಯಾ ಲಯದಲ್ಲಿ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

You cannot copy contents of this page