ಅಗಲಿದ ಗಾನಕೋಗಿಲೆ ಆಶಾ ಭೋಸ್ಲೆಗೆ ಇಂದು ಸಂಜೆ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ: ಪ್ರಧಾನಿ ಸೇರಿ ಹಲವರು ಗಣ್ಯರಿಂದ ಕಂಬನಿ

ಮುಂಬೈ: ಭಾರತೀಯ ಚಲನಚಿತ್ರರಂಗದ ಅಪ್ರತಿಮ ಗಾಯಕಿ, ಸಾವಿರಾರು ಸುಮಧುರ ಗೀತೆಗಳ ಮೂಲಕ ಕೋಟ್ಯಂತರ ಜನರ ಹೃದಯ ಗೆದ್ದಿದ್ದ ಪದ್ಮಭೂಷಣ ಆಶಾ ಭೋಸ್ಲೆ (92) ಅಂತ್ಯಕ್ರಿಯೆ ಇಂದು ಸಂಜೆ  ೪ ಗಂಟೆಗೆ ಮುಂಬೈಯ ಐತಿಹಾಸಿಕ ಶಿವಾಜಿ ಪಾರ್ಕ್ ಸ್ಮಶಾನದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನಗಳ ಸಹಿತ ನೆರವೇರಲಿದೆ.  ಈ ಮಹಾನ್ ಚೇತನದ ಅಗಲಿಕೆಗೆ ಪ್ರಧಾನಮಂತ್ರಿ ನರೇಂದ್ರಮೋದಿ ಸೇರಿದಂತೆ ಹಲವು ಗಣ್ಯಾತೀತರು ಕಂಬನಿ ಮಿಡಿದಿದ್ದಾರೆ. ಆಶಾ ಭೋಸ್ಲೆಯವರ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶ ಕ್ಕಾಗಿ ಇಂದು ಬೆಳಿಗ್ಗೆಯಿಂದ ಮುಂಬೈನ ಲೋವರ್ ಪರೇಲ್‌ನಲ್ಲಿ ರುವ ಅವರ ಮನೆಯಲ್ಲಿ ಇರಿಸಲಾಗಿದೆ. ಸಂಜೆ ೪ ಗಂಟೆ ಬಳಿಯ ಅಂತ್ಯಕ್ರಿಯೆ  ಕ್ರಮಗಳು ನಡೆಯಲಿದೆ.

ಮುಂಬೈಯ ಬ್ರೀಚ್‌ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಆಶಾ ಭೋಸ್ಲೆ ವಯೋಸಹಜ ಕಾಯಿಲೆಯಾದ ಆರ್ಗನ್ ವೈಫಲ್ಯದಿಂದಾಗಿ ನಿನ್ನೆ ಕೊನೆಯುಸಿ ರೆಳೆದಿದ್ದಾರೆ. ಇವರು ಹಿಂದಿ, ಮರಾಠಿ, ಕನ್ನಡ, ಮಲೆಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲಿ 12,500ಕ್ಕೂ ಅಧಿಕ  ಹಾಡುಗಳನ್ನು ಹಾಡಿ ವಿಶ್ವದಾಖಲೆ ಬರೆದಿದ್ದಾರೆ. ಇವರ ವಿದಾಯ ಭಾರತೀಯ ಸಂಗೀತ ಲೋಕಕ್ಕೆ ಭರಿಸಲಾಗದ ನಷ್ಟವಾಗಿದೆ.

You cannot copy contents of this page