ಎಡನೀರು ಶ್ರೀ ವಿಷ್ಣುಮಂಗಲ ಕ್ಷೇತ್ರದಲ್ಲಿ ಕಳವು: ಆರೋಪಿಯ ಬಂಧನ ದಾಖಲು

ಕಾಸರಗೋಡು: ನವಂಬರ್ 3ರಂದು ರಾತ್ರಿ ಎಡನೀರು ಮಠದ ಶ್ರೀ ವಿಷ್ಣುಮಂಗಲ ಕ್ಷೇತ್ರದ ಬಾಗಿಲು  ಮುರಿದು ಒಳನುಗ್ಗಿ ಶ್ರೀ ಕ್ಷೇತ್ರದ ಕಾಣಿಕೆ ಹುಂಡಿ ಒಡೆದು ಅದರಲ್ಲಿದ್ದ 7500ರೂ.ನಷ್ಟು ಹಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಕುಖ್ಯಾತ ಅಂತಾರಾಜ್ಯ ಕಳವು ಪ್ರಕರಣದ ಆರೋಪಿ ಕರ್ನಾಟಕ ಕಡಬ ತಾಲೂಕಿನ ಪೊಯ್ಲಿ ಅತೂರು ಕುಳಾಯಿ ಹೌಸ್‌ನ ಇಬ್ರಾಹಿಂ ಕಲಂದರ್ ಅಲಿಯಾಸ್ ಇಬ್ರಾಹಿಂ (45)ನ ಬಂಧನವನ್ನು ವಿದ್ಯಾನಗರ ಪೊಲೀಸ್ ಠಾಣೆಯ ಎಸ್‌ಐ ಎ. ರಾಮಕೃಷ್ಣನ್ ದಾಖಲಿಸಿಕೊಂಡಿದ್ದಾರೆ.

ಎಡನೀರು ಶ್ರೀ ವಿಷ್ಣುಮಂಗಲ ಕ್ಷೇತ್ರದ ಪಂಚಲೋಹ ವಿಗ್ರಹದ ಬಲಿಬಿಂಬ ಯಥಾ ಸ್ಥಾನದಿಂದ ಬದ ಲಾಯಿಸಿದ ಸ್ಥಿತಿಯಲ್ಲಿ ಅಂದು ಪತ್ತೆ ಯಾಗಿತ್ತು. ಮಾತ್ರವಲ್ಲದೆ ಗಣಪತಿ ದೇವರ ಗುಡಿಯ ಬಾಗಿಲು ಒಡೆಯ ಲಾಗಿತ್ತು. ದೇವಸ್ಥಾನದ ಸ್ಟೀಲ್ ಕಪಾಟಿ ನೊಳಗಿರಿಸಿದ್ದ ಸಾಮಗ್ರಿಗಳನ್ನೆಲ್ಲವನ್ನು ಕಳ್ಳರು ಚೆಲ್ಲಾಪಿಲ್ಲಿಗೊಳಿಸಿದ್ದರು. ನ. 3ರಂದು ಬೆಳಿಗ್ಗೆ ಅರ್ಚಕರು ಗರ್ಭಗುಡಿ ಬಾಗಿಲು ತೆರೆಯಲು ಬಂದಾಗ ಆ ಕ್ಷೇತ್ರದಲ್ಲಿ ಕಳವು ನಡೆದ ವಿಷಯ ಅವರ ಗಮನಕ್ಕೆ ಬಂದಿತ್ತು. ಅದರಂತೆ ಎಡನೀರು ಮಠದ ಅಸಿಸ್ಟೆಂಟ್  ಮೆನೇಜರ್ ನೀಡಿದ ದೂರಿನಂತೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ಎಸ್‌ಐ ವಿ. ರಾಮಕೃಷ್ಣನ್ ನೇತೃತ್ವದ ಪೊಲೀಸರ ತಂಡ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ನ. ೪ರಂದು ಮುಂಜಾನೆ ನಡೆದ ಕಳವು ಪ್ರಕರಣ, ಅದೇ ದಿನ ನೆಲ್ಲಿಕಟ್ಟೆ ಶ್ರೀ ನಾರಾಯಣಗುರು ದೇವ ಮಂದಿರದಲ್ಲಿ ನಡೆದ ಕಳವು, ಪೊಯಿನಾಚಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ನಡೆದ ಕಳವು ಸೇರಿದಂತೆ ಇತರ ಹಲವು ಕಳವು ಪ್ರಕರಣಗಳಲ್ಲ್ಲೂ ಇಬ್ರಾಹಿಂ ಕಲಂದರ್ ಆರೋಪಿಯಾಗಿದ್ದಾನೆ.

ಬಂಟ್ವಾಳದ ಎರಡು ಕ್ಷೇತ್ರಗಳಲ್ಲೂ ಇದೇ ರೀತಿ ಕಳವು ನಡೆಸಲಾಗಿತ್ತು.

ಈ ಮಧ್ಯೆ ಆರೋಪಿ ಇಬ್ರಾಹಿಂ ಕಲಂದರ್‌ನ ನೇತೃತ್ವದ ಆರೋಪಿಗಳ ತಂಡ ಕಾಸರಗೋಡಿನ ಹಣಕಾಸು ಸಂಸ್ಥೆಯೊಂದನ್ನು ದರೋಡೆಗೈಯ್ಯುವ ಉದ್ದೇಶದಿಂದ ನಂಬ್ರ ಪ್ಲೇಟ್ ಇಲ್ಲದ ಕಾರಿನಲ್ಲಿ ಕಳೆದ ಆದಿತ್ಯವಾರ ಕಾಸರಗೋಡಿಗೆ ಬರುತ್ತಿದ್ದ ದಾರಿ ಮಧ್ಯೆ ದೈಗೋಳಿಯಲ್ಲಿ ಊರವರ ಸಹಾಯ ದೊಂದಿಗೆ ಪೊಲೀಸರು ಆ ಕಳವು ತಂಡಕ್ಕೆ ಸೇರಿದ ಕೋಡಿ ಉಳ್ಳಾಲದ ಫೈಸಲ್, ಸೈಯಿದ್ ಅಮಾನ್ ಎಂಬವರನ್ನು ಸೆರೆಹಿಡಿದಿದ್ದರು. ಆ ವೇಳೆ ಆ ಕಾರಿನಲ್ಲಿದ್ದ ಇಬ್ರಾಹಿಂ ಕಲಂದರ್ ಮತ್ತು ಇತರ ನಾಲ್ಕು ಮಂದಿ ಪೊಲೀಸರ ಕೈಯಿಂದ ತಪ್ಪಿಸಿ ಪರಾರಿ iಗಿದ್ದರು. ಆ ಕಾರಿನಲ್ಲಿ ಗ್ಯಾಸ್ ಕಟ್ಟರ್ ಹಾಗೂ  ಮಾರಕಾಯುಧಗಳನ್ನೂ  ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದರು. ನಂತರ ಪೊಲೀಸರು ನಡೆಸಿದ ಮುಂದುವರಿದ ಶೋಧದಲ್ಲಿ  ತಪ್ಪಿಸಿಕೊಂಡಿದ್ದ ಇತರರ ಪೈಕಿ ಇಬ್ರಾಹಿಂ ಕಲಂದರ್‌ನನ್ನು ಬಂಧಿಸಿದ್ದರು. ನಂತರ ಆತನನನ್ನು ಪೊಲೀಸರು ತೀವ್ರ ವಿಚಾರಣೆಗೊಳ ಪಡಿಸಿದಾಗ ಎಡನೀರು ಶ್ರೀ ವಿಷ್ಣುಮಂಗಲ ಕ್ಷೇತ್ರ ಸೇರಿದಂತೆ ಇತರ ಕಡೆಗಳಲ್ಲಿ ಕಳವು ನಡೆಸಿದ್ದು, ಆತನ ನೇತೃತ್ವದ ತಂಡವಾಗಿತ್ತೆಂ ಬುವುದು ಸಾಬೀತುಗೊಂಡಿತ್ತು. ಬಂಧನದ ನಂತರ ಆರೋಪಿ ಇಬ್ರಾಹಿಂ ಕಲಂದರ್‌ನನ್ನು ನ್ಯಾಯಾಲಯದ ನಿರ್ದೇಶ ಪ್ರಕಾರ  ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page