ಎಡಿಎಂ ಆತ್ಮಹತ್ಯೆ: ಪಿ.ಪಿ. ದಿವ್ಯಾ ವಿರುದ್ಧ ಕ್ರಮ
ಕಣ್ಣೂರು: ಕಣ್ಣೂರು ಎಡಿಎಂ ಆಗಿದ್ದ ನವೀನ್ ಬಾಬು ಅವರ ಆತ್ಮಹತ್ಯೆಗೆ ಸಂಬಂಧಿಸಿ ವಿವಾದಕ್ಕೆಡೆಯಾದ ಕಣ್ಣೂರು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆಯೂ ಸಿಪಿಎಂ ನೇತಾರೆಯಾದ ಪಿ.ಪಿ. ದಿವ್ಯಾ ವಿರುದ್ಧ ಇದೀಗ ಕೊನೆಗೂ ಕ್ರಮಕ್ಕೆ ಸಿಪಿಎಂ ಮುಂದಾಗಿದೆ. ಇದರಂತೆ ದಿವ್ಯಾರನ್ನು ಬ್ರಾಂಚ್ ಕಮಿಟಿಗೆ ಹಿಂಬಡ್ತಿ ನೀಡಿದ್ದು, ಅಲ್ಲದೆ ಅವರನ್ನು ಪಕ್ಷದ ಎಲ್ಲಾ ಹೊಣೆಗಾರಿಕೆಗಳಿಂದ ಹೊರತುಪಡಿಸಲು ಸಿಪಿಎಂ ಕಣ್ಣೂರು ಜಿಲ್ಲಾ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ. ದಿವ್ಯಾರಿಗೆ ಗಂಭೀರ ಲೋಪವುಂಟಾಗಿದೆಯೆಂದು ಪಕ್ಷ ಖಚಿತಪಡಿಸಿದ್ದು, ಇದರಿಂದ ಕ್ರಮಕ್ಕೆ ಮುಂದಾಗಿದೆ.