ಎಡಿಎಂ ಆತ್ಮಹತ್ಯೆ ಪ್ರಕರಣ: ದಿವ್ಯಾ ಪೊಲೀಸ್ ಕಸ್ಟಡಿಗೆ; ಜಾಮೀನು ಅರ್ಜಿ ನ್ಯಾಯಾಲಯದಲ್ಲಿ ಇಂದು ಪರಿಗಣನೆ
ಕಣ್ಣೂರು: ಅಡಿಶನಲ್ ಡಿಸ್ಟ್ರಿಕ್ಟ್ ಮೆಜಿಸ್ಟ್ರೇಟ್ ಆಗಿದ್ದ ಕೆ. ನವೀನ್ ಬಾಬುರ ಮರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪಿ.ಪಿ. ದಿವ್ಯಾರನ್ನು ಇಂದು ಪೊಲೀಸರು ಕಸ್ಟಡಿಗೆ ತೆಗೆದುಕೊಳ್ಳುವರು. ಇದಕ್ಕಿರುವ ಅರ್ಜಿಯನ್ನು ಬೆಳಿಗ್ಗೆ ತನಿಖಾ ತಂಡ ಕಣ್ಣೂರು ಜ್ಯುಡೀಷಲ್ ಫಸ್ಟ್‌ಕ್ಲಾಸ್ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನೀಡಿತು. ದಿವ್ಯಾಳಿಗೆ ಬೇಕಾಗಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ಇಂದು ತಲಶ್ಶೇರಿ ಸೆಶನ್ಸ್ ನ್ಯಾಯಾಲಯ ಪರಿಗಣಿಸಲಿದೆ. ಪೊಲೀಸರ ವರದಿ ಲಭಿಸಿದ ಬಳಿಕವೇ ವಿಚಾರಣೆಯ ದಿನಾಂಕವನ್ನು ತೀರ್ಮಾನಿಸಲಾಗು ವುದೆಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಜಾಮೀನು ಅರ್ಜಿಯನ್ನು ವಿರೋಧಿಸುವುದಾಗಿ ಎಡಿಎಂರ ಕುಟುಂಬ ತಿಳಿಸಿದೆ.
ಇದೇ ವೇಳೆ ಎಡಿಎಂರ ಮರಣಕ್ಕೆ ಸಂಬಂಧಿಸಿ ದಿವ್ಯಾ ವಿರುದ್ಧ ಪಕ್ಷದಲ್ಲಿ ಕ್ರಮ ಕೈಗೊಳ್ಳುವುದು ಬೇಡ ಎಂದು ಸಿಪಿಎಂ ತೀರ್ಮಾನಿಸಿದೆ. ಕಣ್ಣೂರು ಜಿಲ್ಲಾ ಸಮಿತಿಯಿಂದ ದಿವ್ಯಾರನ್ನು ಹಿಂಭಡ್ತಿ ನೀಡುವುದು ಪರಿಗಣನೆಯಲ್ಲಿ ಲ್ಲವೆಂದು ಸಿಪಿಎಂ ನೇತೃತ್ವ ತಿಳಿಸಿದೆ. ಜಿಲ್ಲಾಧಿಕಾರಿಯ ಪಾತ್ರದ ಬಗ್ಗೆ ತನಿಖೆ ನಡೆಸಬೇಕೆಂದು, ಜಿಲ್ಲಾಧಿಕಾರಿಯನ್ನು ವರ್ಗಾಯಿಸಬೇಕೆಂದೂ ಆಗ್ರಹಿಸಿ ಕಣ್ಣೂರು ಜಿಲ್ಲಾಧಿಕಾರಿ ಕಚೇರಿಗೆ ಕಾಂಗ್ರೆಸ್ ಪ್ರತಿಭಟನಾ ಮೆರವಣಿಗೆ ನಡೆಸಲಿದೆ.