ಎದೆಗೆ ದೋಣಿ ಬಡಿದು ಬೆಸ್ತ ಸಾವು

ಕಾಸರಗೋಡು: ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ಹಿಂತಿರುಗುತ್ತಿದ್ದ ವೇಳೆ ಬಲವಾದ ಅಲೆಯೆದ್ದು ಅದರಿಂದ ದೋಣಿ ನಿಯಂತ್ರಣ ತಪ್ಪಿ ಅದರ ಒಂದು ಭಾಗ ಎದೆಗೆ ತಾಗಿ ಬೆಸ್ತ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.  ಅಜಾನೂರು ಕಡಪ್ಪುರದ ಕಣ್ಣನ್‌ರ ಪುತ್ರ ಕೆ. ರವಿ (50) ಸಾವನ್ನಪ್ಪಿದ ವ್ಯಕ್ತಿ. ನಿನ್ನೆ ಮೂರು ಗಂಟೆ ವೇಳೆ ಪಡನ್ನ ತೈಕಡಪ್ಪುರದ ಅಳಿವೆ ಬಾಗಿಲಿನಲ್ಲಿ ಈ ಘಟನೆ ನಡೆದಿದೆ.  ಎ.ಕೆ. ರಂಜಿತ್ ಎಂಬವರ ಮಾಲಕತ್ವದಲ್ಲಿರುವ ಕೃಷ್ಣ ಕೃಪಾ ಎಂಬಹೆಸರಿನ ಫೈಬರ್ ದೋಣಿಯಲ್ಲಿ ರವಿ ಮತ್ತು ಇತರ ಕಾರ್ಮಿ ಕರು  ಮೀನುಗಾರಿ ಕೆಗೆಂದು ಸಮುದ್ರ ಕ್ಕಿಳಿದು ಹಿಂತಿರುಗಿ ಬರುವ ವೇಳೆ ಅಳಿವೆ ಬಾಗಿಲಿ ನಲ್ಲಿ ಆಳೆತ್ತರ ಅಲೆ ಎದ್ದಿತು. ಇದರಿಂದ ದೋಣಿಯ ಒಂದು ಭಾಗ ರವಿಯವರ ಎದೆಗೆ ಬಡಿದು ಅಲ್ಲೇ ಕುಸಿ ದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ತೃಕ್ಕರಿಪುರ ಕರಾವಳಿ ಪೊಲೀಸರು ಈ ಬಗ್ಗೆ ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮೃತರು ಪತ್ನಿ ಸಿಂಧು, ಮಕ್ಕಳಾದ  ಅಂಜು, ಆಕಾಶ್, ಸಹೋದರ-ಸಹೋದರಿಯರಾದ ರಮೇಶನ್, ವಿಲಾ ಸಿನಿ, ರಮ, ಲತಾ, ಕಲಾ, ರೇಖಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page