ಕಾಸರಗೋಡು: ಅಬಕಾರಿ ತಂಡ ನಿನ್ನೆ ಎರಡುಕಡೆಗಳಲ್ಲಿ ನಡೆಸಿದ ದಾಳಿಯಲ್ಲಿ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ಇಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ.
ಅಡೂರು ನಾಗತ್ತುಮೂಲೆಯಲ್ಲಿ ಸ್ಟ್ರೈಕಿಂಗ್ ಫೋರ್ಸ್ ಕರ್ತವ್ಯದ ಅಂಗವಾಗಿ ಬದಿಯಡ್ಕ ಎಕ್ಸೈಸ್ ಇನ್‌ಸ್ಪೆಕ್ಟರ್ ಸೈಯದ್ ಮುಹಮ್ಮದ್ ವೈ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲ್ಲಿ ೭.೫೬ ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿದೆ. ಇದಕ್ಕೆ ಸಂಬಂಧಿಸಿ ನಾಗತ್ತುಮೂಲೆ ನಿವಾಸಿ ಚಂದ್ರನ್ ಬಿ (38) ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಪ್ರಿವೆಂಟೀವ್ ಆಫೀಸರ್ ಮಂಜು ನಾಥ ಆಳ್ವ ಕೆ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಪ್ರಭಾಕರನ್ ಎಂ.ಎ, ಜನಾರ್ದನನ್ ಎನ್, ವಿನೋದ್ ಕೆ, ಲಿಜಿನ್ ಆರ್, ಶಮ್ಯಾ ಪಿ ಮತ್ತು ಚಾಲಕ ಸತ್ಯನ್ ಎಂಬವರು ಈ ಕಾರ್ಯಾಚರಣೆ ಯಲ್ಲಿ ಒಳಗೊಂಡಿದ್ದರು.
ಇದೇ ರೀತಿ ಪನಯಾಲ್ ತೋ ಕಾನ ಮೊಟ್ಟದಲ್ಲಿ ಅಬಕಾರಿ ತಂಡ ನಡೆಸಿದ ದಾಳಿಯಲ್ಲಿ ಸ್ಕೂಟರ್‌ನಲ್ಲ್ಲಿ ಸಾಗಿಸುತ್ತಿದ್ದ 3.24 ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪ ಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ಸ್ಥಳೀಯ ನಿವಾಸಿ ಪಂಕಜಾಕ್ಷನ್ ಎಂಬಾತನ ವಿರುದ್ಧ ಕೇಸು ದಾಖಲಿ ಸಲಾಗಿದೆ. ಮಾತ್ರವಲ್ಲ 5000 ರೂ. ನಗದನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಹೊಸದುರ್ಗ ರೇಂಜ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಕೆ.ಎಂ. ಪ್ರದೀಪ್ ನೇತೃತ್ವದ ತಂಡ ಈ ಅಬಕಾರಿ ಕಾರ್ಯಾಚರಣೆ ನಡೆಸಿದೆ.