ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಮೇ 8, ಹೈಯರ್ ಸೆಕೆಂಡರಿ ಮೇ 9ಕ್ಕೆ
ಕಾಸರಗೋಡು: ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಮೇ 8 ಹಾಗೂ ಹೈಯರ್ ಸೆಕೆಂಡರಿ ಪರೀಕ್ಷಾ ಫಲಿತಾಂಶ ಮೇ 9ರಂದು ಪ್ರಕಟ ಗೊಳ್ಳಲಿದೆಯೆಂದು ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ತಿಳಿಸಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆಗೆ ಈ ಬಾರಿ 4,27,105 ಮಂದಿ ವಿದ್ಯಾರ್ಥಿ ಗಳು ಬರೆದಿದ್ದಾರೆ. ಇದರಲ್ಲಿ 2,17,525 ಹುಡುಗರು ಮತ್ತು 2,09,580 ಮಂದಿ ಹುಡುಗಿಯರು ಒಳಗೊಂಡಿದ್ದಾರೆ.
ಇನ್ನು ಹೈಯರ್ ಸೆಕೆಂಡರಿ ಪರೀಕ್ಷೆಗೆ ಈ ಬಾರಿ 2,25,736 ಹುಡುಗರು ಮತ್ತು 2,17,384 ಹುಡುಗಿಯರು ಸೇರಿದಂತೆ ಒಟ್ಟು 4,41,120 ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ.
ಇನ್ನು ವೊಕೇಷನಲ್ ಹೈಯರ್ ಸೆಕೆಂಡರಿ ರೆಗ್ಯುಲರ್ ವಿಭಾಗದಲ್ಲಿ 27,798 ಮಂದಿ ಹಾಗೂ ಪ್ರೈವೆಟ್ ವಿಭಾಗದಲ್ಲಿ 1,502 ಮಂದಿ ಸೇರಿದಂತೆ ಒಟ್ಟು 29,300 ಮಂದಿ ದ್ವಿತೀಯ ವರ್ಷ ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 18,297 ಹುಡಗರು ಮತ್ತು 11,003 ಹುಡುಗಿಯರು ಒಳಗೊಂಡಿದ್ದಾರೆ.
ಕಳೆದವರ್ಷ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಮೇ19ರಂದು ಪ್ರಕಟಿಸಲಾಗಿತ್ತು. ಅದೇ ರೀತಿ ಹೈಯರ್ ಸೆಕೆಂಡರಿ ಪರೀಕ್ಷಾ ಫಲಿತಾಂಶ ಮೇ 25ರಂದು ಪ್ರಕಟಿಸಲಾಗಿತ್ತು.