ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ: ಕನ್ನಡ ಮಾಧ್ಯಮ ಶಾಲೆಗಳು ಸೇರಿ 79 ಸರಕಾರಿ, 26 ಅನುದಾನಿತ, 29 ಅನನುದಾನಿತ ಶಾಲೆಗಳಲ್ಲಿ ಶೇ. 100 ಉತ್ತೀರ್ಣ
ಕಾಸರಗೋಡು: ನಿನ್ನೆ ಪ್ರಕಟಗೊಂಡ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕಾಸರಗೋಡು ಜಿಲ್ಲೆಯ ಹೆಚ್ಚಿನ ಎಲ್ಲಾ ಕನ್ನಡ ಮಾಧ್ಯಮ ಶಾಲೆಗಳೂ ಉತ್ತಮ ಸಾಧನೆ ಮಾಡಿವೆ.
ಕಾಸರಗೋಡು ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಗಳು ಸೇರಿದಂತೆ 79 ಸರಕಾರಿ ಹೈಸ್ಕೂಲ್ಗಳು, 26 ಅನುದಾನಿತ ಹೈಸ್ಕೂಲ್ಗಳು ಮತ್ತು 29 ಅನನುದಾನಿತ ಶಾಲೆಗಳಲ್ಲಿ ಶೇ. 100ರಷ್ಟು ಫಲಿತಾಂಶ ಉಂಟಾಗಿದೆ.
ಸರಕಾರಿ ಹೈಸ್ಕೂಲ್ಗಳ ಪೈಕಿ ಉಪ್ಪಳ 74, ಶಿರಿಯ 52, ಬಂಗ್ರಮಜೇಶ್ವರ 38, ಪೈವಳಿಕೆ 38, ಆಲಂಪಾಡಿ 94, ಚೆರ್ಕಳ ಸೆಂಟ್ರಲ್ 281, ಇರಿಯಣ್ಣಿ 159, ಬಂದಡ್ಕ 152, ಮೊಗ್ರಾಲ್ ಪುತ್ತೂರು 216, ಮೊಗ್ರಾಲ್ 234, ಪಾಂಡಿ 35, ದೇಲಂಪಾಡಿ 66, ಅಂಗಡಿಮೊಗರು 112, ಪಡ್ರೆ 30, ಎಡನೀರು 62, ಮುಳ್ಳೇರಿಯ 124, ಚೆಮ್ನಾಡ್ 210, ಚಂದ್ರಗಿರಿ 187, ಕಾಸರಗೋಡು ಸರಕಾರಿ ಹೆಮ್ಮಕ್ಕಳ ಶಾಲೆ 35, ಕಡಂಬಾರ್ 78, ಮೂಡಂಬೈಲ್ 26, ಕೊಡ್ಯಮ್ಮೆ 104, ಕಾಸರಗೋಡು ಮುಸ್ಲಿಂ ಹೈಸ್ಕೂಲ್ 115, ಜಿವಿಎಚ್ಎಸ್ಎಸ್ ಫಾರ್ ಗರ್ಲ್ಸ್ ಕಾಸರಗೋಡು 126, ಕೊಳತ್ತೂರು 55, ಮುನ್ನಾಡ್ 51, ಕುಟ್ಟಿಕ್ಕೋಲ್ 73 ಸೇರಿದಂತೆ ಒಟ್ಟು 79 ಸರಕಾರಿ ಶಾಲೆಗಳಲ್ಲಿ ಶೇಕಡಾ 100ರಷ್ಟು ಫಲಿತಾಂಶ ಬಂದಿದೆ.
ಅನುದಾನಿತ ಶಾಲೆಗಳ ಪೈಕಿ ಎಸ್ಎಪಿಎಚ್ಎಸ್ ಅಗಲ್ಪಾಡಿ 87, ಬಿಇಎಂ ಹೈಸ್ಕೂಲ್ ಕಾಸರಗೋಡು 252, ಕೊಡ್ಲಮೊಗರು ಎಸ್ವಿವಿಎಚ್ಎಸ್ 182, ಕುರುಡಪದವು ಕೆವಿಎಸ್ಎಂ ಎಚ್ಎಸ್ 74, ಬೋವಿಕಾನ ಬಿಎಆರ್ಎಚ್ ಎಸ್ಎಸ್ 195, ಕಾಟುಕುಕ್ಕೆ ಎಸ್ಎಸ್ಎಚ್ ಎಸ್ಎಸ್ 57, ಪೆರಡಾಲ ಎನ್ಎಚ್ಎಸ್ 512, ಪೆರಡಾಲ ನೀರ್ಚಾಲ್ ಎಂಎಸ್ಸಿಎಚ್ ಎಸ್ಎಸ್ 176, ಎಡನೀರು ಸ್ವಾಮೀಜೀಸ್ ಹೈಸ್ಕೂಲ್ 19, ಚೆಮ್ನಾಡ್ ಸಿಜೆಎಚ್ಎಸ್ಎಸ್ 379, ಕೂಡ್ಲು ಎಸ್ಜಿಕೆಎಚ್ಎಸ್ 87, ಧರ್ಮತ್ತಡ್ಕ ಎಸ್ಡಿಪಿಎಚ್ಎಸ್ 247, ಚಟ್ಟಂಚಾಲ್ ಸಿಎಚ್ಎಸ್ಎಸ್ 563 ಸೇರಿದಂತೆ ಒಟ್ಟು 29 ಅನುದಾನಿತ ಶಾಲೆಗಳಲ್ಲಿ ಶೇಕಡಾ 100ರಷ್ಟು ಫಲಿತಾಂಶ ಉಂಟಾಗಿದೆ. ಇದರ ಹೊರತಾಗಿ ಜಿಲ್ಲೆಯ 26 ಅನನುದಾನಿತ ಶಾಲೆಗಳಲ್ಲೂ ಶೇಕಡಾ 100ರಷ್ಟು ಫಲಿತಾಂಶ ಉಂಟಾಗಿದೆ.