ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಸಾಧನೆ
ಕಾಸರಗೋಡು: ಕಳೆದ ವರ್ಷದಂತೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕಾಸರಗೋಡು ಜಿಲ್ಲೆ ಈ ವರ್ಷವೂ ಉತ್ತಮ ನಿರ್ವಹಣೆ ತೋರಿದೆ. ಈ ವರ್ಷ ಜಿಲ್ಲೆಯಲ್ಲಿ 10,703 ಹುಡುಗರು ಮತ್ತು 9844 ಹುಡುಗಿಯರೂ ಸೇರಿದಂತೆ ಒಟ್ಟು 20547 ಮಂದಿ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಗೆ ಬರೆದಿದ್ದರು. ಇದರಲ್ಲಿ 10,649 ಗಂಡು ಮತ್ತು 9824 ಹೆಣ್ಮಕ್ಕಳು ಸೇರಿದಂತೆ ಒಟ್ಟು 20,473 ಮಂದಿ (ಶೇ. 99.64) ಉತ್ತೀರ್ಣರಾಗಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಪೈಕಿ 1891 ಹೆಣ್ಮಕ್ಕಳು ಸೇರಿ 2910 ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಪಡೆದಿದ್ದಾರೆ.ಸರಕಾರಿ ಹೈಸ್ಕೂಲ್ಗಳ ಪೈಕಿ 79, ಎಯ್ಡೆಡ್ 29 ಮತ್ತು 26 ಅನ್ ಎಯ್ಡೆಡ್ ಶಾಲೆಗಳಲ್ಲಿ ಈ ಬಾರಿ ಪರೀಕ್ಷೆಗೆ ಬರೆದ ಎಲ್ಲರೂ ಉತ್ತೀರ್ಣರಾಗಿ ಆ ಶಾಲೆಗಳಿಗೆ ಶೇ. 100ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷ 85 ಸರಕಾರಿ, 31 ಅನುದಾನಿತ ಮತ್ತು 28 ಅನನುದಾನಿದ ಶಾಲೆಗಳಲ್ಲಿ ಶೇ. 100ರಷ್ಟು ಫಲಿತಾಂಶ ಉಂಟಾಗಿತ್ತು. ರಾಜ್ಯದಲ್ಲಿ ಒಟ್ಟಾರೆಯಾಗಿ ಈ ಬಾರಿ 4,26,892 ವಿದ್ಯಾರ್ಥಿಗಳು ಪರೀಕ್ಷೆಗೆ ಬರೆದಿದ್ದು, ಅದರಲ್ಲಿ 4,25,565 ಮಂದಿ ಉತ್ತೀರ್ಣರಾಗಿ ಶೇ. 99.69 ಫಲಿತಾಂಶ ಉಂಟಾಗಿದೆ. ಇದರಲ್ಲಿ 71,831 ಮಂದಿ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಪಡೆದಿದ್ದಾರೆ.