ಎಸ್‌ಟಿಯು ಮೋಟಾರು ಫೆಡರೇಶನ್ ಜಿಲ್ಲಾ ಸಮ್ಮೇಳನ ಸಿದ್ಧತೆ ಆರಂಭ

ಕುಂಬಳೆ: ಎಸ್‌ಟಿಯು ಮೋ ಟರ್ ಆಂಡ್ ಇಂಜಿನಿಯರಿಂಗ್ ವರ್ಕರ್ಸ್ ಯೂನಿಯನ್ ಜಿಲ್ಲಾ ಪ್ರತಿನಿಧಿ ಸಮ್ಮೇಳನ ಕುಂಬಳೆ ಆರಿ ಕ್ಕಾಡಿಯ ಕೆಪಿಎಸ್ ರಿಸೋರ್ಟ್‌ನಲ್ಲಿ ನಡೆಯಲಿದ್ದು, ಇದರ ಸಿದ್ಧತೆ ಆರಂಭಗೊಂಡಿದೆ. ಈ ತಿಂಗಳ 14ರಂದು ನಡೆಯುವ ಸಮ್ಮೇಳನದ ಬಗ್ಗೆ  ಪೂರ್ವಭಾವಿ ಸಭೆ ಕುಂಬಳೆ ಬಾಫಾತಿ ತಂಙಳ್ ಸೌಧದಲ್ಲಿ ಜರಗಿದ್ದು, ಅಶ್ರಫ್ ಕಾರ್ಲೆ ಅಧ್ಯಕ್ಷತೆ ವಹಿಸಿದರು.

ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಎ.ಕೆ. ಆರೀಫ್ ಉದ್ಘಾಟಿಸಿದರು. ಕುಂಬಳೆ ಪಂಚಾಯತ್ ಲೀಗ್ ಅಧ್ಯಕ್ಷ ಬಿ.ಎನ್. ಮುಹಮ್ಮದಲಿ, ಅಫ್ತಾಬ್ ತಂಙಳ್‌ರಿಂದ ಫಂಡ್ ಸ್ವೀಕರಿಸಿ ನಿಧಿ ಸಂಗ್ರಹ ಉದ್ಘಾಟಿಸಿದರು. ಹಲವರು ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page