ಏಮ್ಸ್ ಆಸ್ಪತ್ರೆ: ಕೇಂದ್ರಾನುಮತಿ ಲಭಿಸುವ ಮೊದಲೇ ಲಕ್ಷಾಂತರ ರೂ. ವ್ಯಯಿಸಿದುದಾದರೂ ಯಾತಕ್ಕಾಗಿ…?- ಹೈಕೋರ್ಟ್

ಕಾಸರಗೋಡು: ಕೇಂದ್ರ ಸರಕಾರದ ಅನುಮತಿ ಲಭಿಸುವ ಮೊದಲೇ ಏಮ್ಸ್ ಆಸ್ಪತ್ರೆ ಸ್ಥಾಪಿಸಲು ಕಲ್ಲಿಕೋಟೆಯ ಕಿನಾಲೂರಿನಲ್ಲಿ ಲಕ್ಷಾಂತರ ರೂ. ವ್ಯಯಿಸಿ ಜಮೀನು ಖರೀದಿಸಿದುದಾದರೂ ಯಾತಕ್ಕಾಗಿ ಎಂದು ಪ್ರಶ್ನಿಸುವ ಮೂಲಕ ಹೈಕೋರ್ಟ್ ರಾಜ್ಯ ಸರಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡಿದೆ. ಏಮ್ಸ್ ಆಸ್ಪತ್ರೆಯನ್ನು ಕಾಸರಗೋಡಿನಲ್ಲಿ ಆರಂಭಿಸಲು ಅನುಮತಿ ನೀಡಬೇಕೆಂದು ಆಗ್ರಹಿಸಿ ಏಮ್ಸ್ ಕಾಸರಗೋಡು ಜನಕೀಯ ಒಕ್ಕೂಟ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಅದಕ್ಕೆ ಸಂಬAಧಿಸಿ ರಾಜ್ಯ ಸರಕಾರ ಹೈಕೋರ್ಟ್ಗೆ ಸಲ್ಲಿಸಿದ ವರದಿಯಲ್ಲಿ, ಕಲ್ಲಿಕೋಟೆಯ ಕಿನಾಲೂರಿನಲ್ಲಿ ಏಮ್ಸ್ ಆಸ್ಪತ್ರೆಗಾಗಿ ಅಗತ್ಯದ ಜಮೀನು ಗುರಿತಿಸಲಾಗಿದೆ ಎಂದು ತಿಳಿಸಿತ್ತು. ಮಾತ್ರವಲ್ಲ ಅದಕ್ಕಾಗಿ ಕಿನಾಲೂರು ಮತ್ತು ಕಾಂತರಾಟ್ ಗ್ರಾಮದಲ್ಲಿ 151.58 ಎಕ್ರೆ ಭೂಮಿ ಈಗಾಗಲೇ ವಶಪಡಿಸಲಾಗಿದೆ. ಇದಕ್ಕಾಗಿ 92.62 ಲಕ್ಷ ರೂ. ಮೀಸಲಿರಿಸಲಾಗಿದೆ. ಅದರಲ್ಲಿ 50 ಲಕ್ಷ ರೂ.ವನ್ನು ಭೂಸ್ವಾಧೀನ ವಿಭಾಗದ ತಹಶೀಲ್ದಾರರಿಗೆ ಮಂಜೂರು ಮಾಡಲಾಗಿದೆ ಎಂದೂ ಸರಕಾರ ನ್ಯಾಯಾಲಯಕ್ಕೆ ತಿಳಿಸಿತ್ತು. ಅದನ್ನು ಪರಿಶೀಲಿಸಿದ ಹೈಕೋರ್ಟ್ನ ವಿಭಾಗೀಯ ಪೀಠ ಕಿನಾಲೂರಿನಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪಿಸಲು ಕೇಂದ್ರ ಸರಕಾರ ಅನುಮತಿ ನೀಡಿದೆಯೇ, ಮಾತ್ರವಲ್ಲ ಇದಕ್ಕಾಗಿ ಕೇಂದ್ರದ ಹೊಸ ದಂಡವನ್ನು ಪಾಲಿಸಲಾಗಿದೆಯೇ ಎಂದು ಪ್ರಶ್ನಿಸಿದಂ. ಕೇಂದ್ರ ಅನುಮತಿ ಲಭಿಸದಿದ್ದರೂ, ಅದಕ್ಕಾಗಿ ಹಣ ಖರ್ಚು ಮಾಡಿದುದಾದರೂ ಯಾತಕ್ಕಾಗಿ ಎಂದೂ ಪ್ರಶ್ನಿಸಿ ರಾಜ್ಯ ಸರಕಾರ ಕ್ರಮವನ್ನು ತೀವ್ರ ತರಾಟೆಗೂ ತೆಗೆದುಕೊಂಡಿದೆ. ಮಾತ್ರವಲ್ಲ ಈ ವಿಷಯ ಕೇಂದ್ರದ ಮಾನದಂಡಗಳನ್ನು ಪಾಲಿಸಿಕೊಂಡೇ ಭೂ ಸ್ವಾಧೀನ ಕ್ರಮ ನಡೆಸಲಾಗಿದೆ ಎಂದಾದಲ್ಲಿ ಅದನ್ನು ಸಾಬೀತುಪಡಿಸುವ ಅಫಿದಾವಿತ್ತನ್ನು ಎಪ್ರಿಲ್ 10ರೊಳಗಾಗಿ ಸಲ್ಲಿಸುವಂತೆಯೂ ನ್ಯಾಯಾಲಯ ಸರಕಾರಕ್ಕೆ ನಿರ್ದೇಶ ನೀಡಿದೆ.

RELATED NEWS

You cannot copy contents of this page