ಒಂದು ಕಿಲೋ ತಂಬಾಕು ಉತ್ಪನ್ನ ಪತ್ತೆ
ಬದಿಯಡ್ಕ: ಬದಿಯಡ್ಕ ಅಬಕಾರಿ ರೇಂಜ್ನ ಎಕ್ಸೈಸ್, ಇನ್ಸ್ಪೆಕ್ಟರ್ ವಿನು ಎಚ್ರ ನೇತೃತ್ವದ ತಂಡ ಬೋವಿಕ್ಕಾನದಲ್ಲಿ ಎರಡು ಅಂಗಡಿಗಳು ಮತ್ತು ಪರಿಸರದಲ್ಲಿ ನಿನ್ನೆ ನಡೆಸಿದ ತಪಾಸಣೆಯಲ್ಲಿ ಕೇರಳದಲ್ಲಿ ನಿಷೇಧ ಹೇರಲಾಗಿರುವ ೧ ಕಿಲೋದಷ್ಟು ತಂಬಾಕು ಉತ್ಪನ್ನಗಳನ್ನು ಪತ್ತೆಹಚ್ಚಿ ವಶಪಡಿಸಿದೆ. ಮಾತ್ರವಲ್ಲ ಇದಕ್ಕೆ ಸಂಬಂಧಿಸಿ ಓರ್ವನಿಂದ ೫೦೦೦ ರೂ. ಮತ್ತು ಇನ್ನೋರ್ವನಿಂದ ೨೦೦ ರೂ. ದಂಡ ವಸೂಲಿ ಮಾಡಿ, ಅವರಿಗೆ ಅಬಕಾರಿ ಅಧಿಕಾರಿಗಳು ಮುನ್ನೆಚಚರಿಕೆಯನ್ನು ನೀಡಿದರು. ಅಬಕಾರಿ ಇಲಾಖೆಯ ಸಿಇಒಗಳಾದ ಜೋಬಿ ಪೋಲ್, ಮೋಹನ್ ಕುಮಾರ್, ಜೋಬಿ ಮತ್ತು ಪ್ರಭಾಕರನ್ ಎಂಬವರು ಈ ಅಬಕಾರಿ ಕರ್ಯಾಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದರು.