ಒಂದು ದುರಸ್ತಿ ಇನ್ನೊಂದು ಹಾನಿ: ಪ್ರತಾಪನಗರದಲ್ಲಿ ಶುದ್ದಜಲ ಪೋಲು
ಉಪ್ಪಳ: ವಿದ್ಯುತ್ ಕಂಬ ಸ್ಥಾಪಿಸು ವಾಗ ನೀರಿನ ಪೈಪ್ ಹಾನಿಯಾಗು ವುದು, ಪೈಪ್ ಹಾಕುವಾಗ ರಸ್ತೆ ಹಾನಿಯಾಗುವುದು, ರಸ್ತೆ ದುರಸ್ತಿ ಮಾಡು ವಾಗ ವಿದ್ಯುತ್ ಕಂಬಕ್ಕೆ ಹಾನಿಯಾ ಗುವುದು ಈಗ ಸಾಮಾನ್ಯವಾಗಿ ಕಂಡು ಬರುತ್ತಿದೆ. ಒಂದನ್ನು ದುರಸ್ತಿಗೊಳಿಸು ವಾಗ ಇನ್ನೊಂದು ಹಾನಿಯಾಗಲೇ ಬೇಕು ಎಂಬ ಶಪಥವನ್ನು ದುರಸ್ತಿ ನಡೆಸುವ ಮಂದಿ ಹಾಕಿಕೊಂಡಿರಬೇ ಕೆಂಬ ಶಂಕೆ ಜನರಲ್ಲಿದೆ. ಎಲ್ಲೇ ಆಗಲೀ ಯಾವುದಾದರೂ ಒಂದು ದುರಸ್ತಿ ಕೆಲಸ ಮಾಡುವಾಗ ಇನ್ನೊಂದಕ್ಕೆ ಹಾನಿಯಾಗುತ್ತಿದ್ದು, ಒಂದರಿಂದ ಜನರಿಗೆ ಉಪಕಾರವಾಗುವಾಗ ಇನ್ನೊಂದರಿಂದ ಉಪದ್ರ ಮಾಡಿ ಹಾಕುತ್ತಿದ್ದಾರೆ. ಇದು ಎಲ್ಲಾ ಕಡೆಗಳಲ್ಲೂ ಕಂಡು ಬರುವ ದೃಶ್ಯ.
ಇದಕ್ಕೆ ಇತ್ತೀಚೆಗಿನ ಉದಾಹರಣೆ ಉಪ್ಪಳ ಪ್ರತಾಪನಗರದಲ್ಲಿ ಕಂಡು ಬಂದಿದೆ. ಇಲ್ಲಿನ ಶಿವಶಕ್ತಿ ಕ್ಲಬ್ ಪರಿಸರದಲ್ಲಿ ವಿದ್ಯುತ್ ಕಂಬ ಹಾಕಲು ಹೊಂಡ ತೋಡುತ್ತಿದ್ದಾಗ ನೀರು ಪೂರೈಕೆಯಾಗುತ್ತಿದ್ದ ಪೈಪ್ ಹಾನಿಗೊಂಡಿದೆ. ಇದರಿಂದಾಗಿ ಕಳೆದ ಮೂರು ದಿನಗಳಿಂದ ಇಲ್ಲಿ ನೀರು ಪೋಲಾಗುತ್ತಿದೆ. ತಾತ್ಕಾಲಿಕ ದುರಸ್ತಿ ನಡೆಸಿ ಕಾರ್ಮಿಕರು ತೆರಳಿದ್ದರೂ ನೀರು ಪೋಲಾಗುತ್ತಿರುವುದು ಮುಂದುವರಿ ದಿದೆ. ಬೇಕೂರು ಟ್ಯಾಂಕ್‌ನಿಂದ ಪ್ರತಾಪ ನಗರ ಪರಿಸರಕ್ಕೆ ನೀರು ವಿತರಿಸುವ ಪೈಪ್ ಹಾನಿಯಾದ ಕಾರಣ ಈ ಭಾಗದ ಜನರಿಗೆ ಕುಡಿಯುವ ನೀರು ಸಮಸ್ಯೆ ತಲೆ ಎತ್ತಿದೆ. ಪೈಪ್ ದುರಸ್ತಿಗೊಳಿ ಸಲು ಸ್ಥಳೀಯರು ಒತ್ತಾಯಿಸಿದ್ದಾರೆ.