ಒಂದು ಬೈಕ್‌ನಲ್ಲಿ ಮೂವರು: ಅಬಕಾರಿ ತಂಡ ತಪಾಸಣೆಗೈದಾಗ ಗಾಂಜಾ ಪತ್ತೆ

ಹೊಸದುರ್ಗ: ಒಂದು ಬೈಕ್‌ನಲ್ಲಿ ಮೂರು ಮಂದಿ ಸಂಚರಿಸುತ್ತಿದ್ದವರನ್ನು ಕಂಡ ಅಬಕಾರಿ ತಂಡ ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಒಂದು ಕಿಲೋ ಗಾಂಜಾ ಪತ್ತೆಯಾಗಿದೆ. ಈ ಸಂಬಂಧ ಅಸ್ಸಾಂ ನಿವಾಸಿಗಳಾದ ಸಮೀರುದ್ದೀನ್ (31), ಜಾಹಿರುಲ್ ಇಸ್ಲಾಂ (19), ಅಸ್ಸರುಲ್ ಇಸ್ಲಾಂ (19) ಎಂಬಿವರನ್ನು  ತಳಿಪರಂಬ ಅಬಕಾರಿ ರೇಂಜ್ ಕಚೇರಿಯ ಅಬಕಾರಿ ಇನ್‌ಸ್ಪೆಕ್ಟರ್ ಎಬಿ ಥೋಮಸ್ ನೇತೃತ್ವದ ತಂಡ ಬಂಧಿಸಿದೆ.  ತಳಿಪರಂಬ-ಪೂವಂ ರಸ್ತೆಯಲ್ಲಿ ಅಬಕಾರಿ ತಂಡ ವಾಹನ ತಪಾಸಣೆ ನಡೆಸುತ್ತಿದ್ದಾಗ ಬೈಕ್‌ನಲ್ಲಿ ಮೂರು ಮಂದಿ ತಲುಪಿದ್ದಾರೆ. ಅವರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ 1.100  ಕಿಲೋ ಗಾಂಜಾ ಪತ್ತೆಯಾಗಿದೆ. ಮಾರಾಟಕ್ಕಾಗಿ ಇವರು ಇದನ್ನು ಸಾಗಿಸುತ್ತಿದ್ದುದಾಗಿ ಬಂಧಿತರು ಅಧಿಕಾರಿಗಳಲ್ಲಿ ತಿಳಿಸಿದ್ದಾರೆ.

You cannot copy contents of this page