ಒಂದು ವರ್ಷದಲ್ಲಿ ಭಾರತಕ್ಕೆ ತಲುಪಿಸಿದ್ದು 300 ಕಿಲೋ ಎಂಡಿಎಂಎ
ಕೊಲ್ಲಂ: ಒಂದು ವರ್ಷದಲ್ಲಿ 300 ಕಿಲೋ ಎಂಡಿಎಂಎ ಭಾರತಕ್ಕೆ ತಲುಪಿಸಿರುವುದಾಗಿ ಕೊಲ್ಲಂನಲ್ಲಿ ಸೆರೆಗೀಡಾದ ನೈಜೀರಿಯಾ ಪ್ರಜೆ ಅಗ್ಬೇಡೊ ಅಸೂಕ ಸೊಲಮನ್ (29) ಎಂಬಾತ ತಿಳಿಸಿದ್ದಾನೆ. ಪೊಲೀಸರು ಈತನನ್ನು ತನಿಖೆಗೊಳಪಡಿಸಿದಾಗ ಬೆಚ್ಚಿಬೀಳಿಸುವ ಈ ಮಾಹಿತಿ ಬಹಿರಂಗಪಡಿಸಿದ್ದಾನೆ. ಎಂಡಿಎಂಎ ಪ್ರಕರಣಕ್ಕೆ ಸಂಬಂಧಿಸಿ ಕೊಲ್ಲಂನ ಇರುವಿಪುರಂ ಪೊಲೀಸರು ಸೊಲಮನ್‌ನನ್ನು ಸೆರೆಹಿಡಿದಿದ್ದಾರೆ. ನೈಜೀರಿಯಾ ಪ್ರಜೆಯಾದ ಫ್ರಾನ್ಸಿಸ್ ಎಂಬಾತ ಮಾದಕ ವಸ್ತು ದಂಧೆಯ ಪ್ರಧಾನ ಕೊಂಡಿಯಾಗಿದ್ದಾನೆ ಎಂದು ಸೊಲಮನ್ ತಿಳಿಸಿದ್ದಾನೆ.