ಕೊಚ್ಚಿ: ನೆಡುಂಬಾಶ್ಶೇರಿ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ತಂಡ ನಡೆಸಿದ ಕಾರ್ಯಾ ಚರಣೆಯಲ್ಲಿ ಒಂದೂವರೆ ಕೋಟಿ ರೂ. ಮೌಲ್ಯದ ಚಿನ್ನ ವಶಪಡಿ ಸಲಾಗಿದೆ. ದುಬೈಯಿಂದ ಬಂದ ಕನ್ಯಾಕುಮಾರಿ ನಿವಾಸಿ ಖಾದರ್ ಮೊಯ್ದೀನ್ ಎಂಬಾದ ಈ ಚಿನ್ನ ತಂದಿರುವುದಾಗಿ ತಿಳಿದು ಬಂದಿದೆ. ಚಿನ್ನವನ್ನು ಈತ ಧರಿಸಿದ್ದ ಜೀನ್ಸ್ ಪ್ಯಾಂಟ್‌ನೊಳಗೆ ಬಚ್ಚಿಡಲಾಗಿತ್ತು.