ಕಂದಾಯ ಜಿಲ್ಲಾ ಶಾಲಾ ಕಲೋತ್ಸವ : ಹೊಸದುರ್ಗ ಉಪಜಿಲ್ಲೆಗೆ ಸಮಗ್ರ ಪ್ರಶಸ್ತಿ
ಹೊಸದುರ್ಗ: ಉದಿನೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಹೊಸದುರ್ಗ ಉಪಜಿಲ್ಲೆ 945 ಅಂಕಗಳೊAದಿಗೆ ಚಾಂಪ್ಯನ್ ಪಟ್ಟವನ್ನು ಗೆದ್ದುಕೊಂ ಡಿದೆ. 890 ಅಂಕಗಳೊAದಿಗೆ ಕಾಸರಗೋಡು ಉಪಜಿಲ್ಲೆ ದ್ವಿತೀಯ ಸ್ಥಾನ ಗಳಿಸಿದೆ. ಕಲೋತ್ಸವದ ಆರಂಭದಿAದಲೇ ಹೊಸದುರ್ಗ ಉಪಜಿಲ್ಲೆ ಮುನ್ನಡೆಯನ್ನು ಕಾಯ್ದುಕೊಂಡು ಬಂದಿತ್ತು.
ಆತಿಥೇಯರಾದ ಚೆರ್ವತ್ತೂರು ಉಪಜಿಲ್ಲೆ 869 ಅಂಕ ಗಳಿಸಿ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಬೇಕಲ ಉಪಜಿಲ್ಲೆ 808, ಕುಂಬಳೆ 796, ಚಿಟ್ಟಾರಿಕ್ಕಲ್ 754, ಮಂಜೇಶ್ವರ 651 ಅಂಕ ಗಳಿಸಿ ನಂತರದ ಸ್ಥಾನದಲ್ಲಿವೆ. ವಿಜೇತರಿಗೆ ಸಂಘಾಟಕ ಸಮಿತಿ ಚೆಯರ್ಮೆನ್ ಶಾಸಕ ಎಂ. ರಾಜಗೋಪಾಲ್ ಟ್ರೋಫಿ ಹಸ್ತಾಂತರಿಸಿದರು. ಪಡನ್ನ ಪಂಚಾಯತ್ ಅಧ್ಯಕ್ಷ ಪಿ.ವಿ. ಮುಹಮ್ಮದ್ ಅಸ್ಲಾಂ, ಬ್ಲೋಕ್ ಪಂಚಾಯತ್ ಸ್ಥಾಯೀ ಸಮಿತಿ ಅಧಕ್ಷ ಎಂ. ಸುಮೇಶ್ ಮೊದಲಾದವರು ಉಪಸ್ಥಿತರಿದ್ದರು.