ಕರ್ನಾಟಕ ಮದ್ಯ ಪತ್ತೆ ಸ್ಕೂಟರ್ ವಶ
ಕಾಸರಗೋಡು: ಚೆರ್ಕಳ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಬಳಿ ಅಬಕಾರಿ ತಂಡ ನಡೆಸಿದ ತಪಾಸಣೆಯಲ್ಲಿ ಸ್ಕೂಟರೊಂದರಲ್ಲಿ ಬಚ್ಚಿಡಲಾಗಿದ್ದ 12.84 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಬಂಧಿಸಿ ಚೆಂಗಳ ಮಾರ್ಥೋಮಾ ರಸ್ತೆ ಬಳಿಯ ಹಾರೀಸ್ ಪಿ.ಎ ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಮಾಲು ಸಾಗಿಸಲು ಬಳಸಲಾದ ಸ್ಕೂಟರನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ.
ಆದರೆ ಆರೋಪಿ ಪರಾರಿ ಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಕಾಸರಗೋಡು ಎಕ್ಸೈಸ್ ರೇಂಜ್ ಕಚೇರಿಯ ಎಕ್ಸೈಸ್ ಪ್ರಿವೆಂಟೀವ್ ಆಫೀಸರ್ ರಂಜನ್ ಕೆ.ವಿ ನೇತೃತ್ವದಲ್ಲಿ ಇತರ ಸಿಬ್ಬಂದಿಗಳಾದ ಪ್ರಶಾಂತ್ ಎ.ವಿ ಮತ್ತು ಶಂಶುದ್ದೀನ್ ಎ.ಟಿ ಎಂಬಿವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.