ಕರ್ನಾಟಕ ಮದ್ಯ ವಶ :ಸ್ಕೂಟರ್ ಸಹಿತ ಓರ್ವ ಸೆರೆ
ಕಾಸರಗೋಡು: ಕೂಡ್ಲು ರಾಮದಾಸ ನಗರದಲ್ಲಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್ನ ಇನ್ಸ್ಪೆಕ್ಟರ್ ಪ್ರಶೋಬ್ ಕೆ.ಎಸ್.ರ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾ ಚರಣೆಯಲ್ಲಿ ಸ್ಕೂಟರೊಂದರಲ್ಲಿ ಸಾಗಿಸಲಾಗುತ್ತಿದ್ದ 3.24 ಲೀಟರ್ (180 ಎಂಎಲ್ನ 18 ಪ್ಯಾಕೆಟ್) ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.
ಇದಕ್ಕೆ ಸಂಬAಧಿಸಿ ರಾಮ ದಾಸನಗರದ ಸೂರ್ಲು ನಿವಾಸಿ ಯೋಗೀಶ್ (ಯೋಗಿ-31) ಎಂಬಾತನನ್ನು ಅಬಕಾರಿ ತಂಡ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದೆ. ಮಾಲು ಸಾಗಿಸಲು ಬಳಸಲಾದ ಸ್ಕೂಟರನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಬಂಧಿತನ ವಿರುದ್ಧ ಇತರ ಹಲವು ಅಬಕಾರಿ ಪ್ರಕರಣಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ (ಗ್ರೇಡ್) ಸಿ.ಕೆ.ವಿ. ಸುರೇಶ್, ಪ್ರಿವೆಂಟೀವ್ ಆಫೀಸರ್ (ಗ್ರೇಡ್) ನೌಶಾದ್ ಕೆ. ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ಅತುಲ್ ಟಿ.ವಿ ಮತ್ತು ಧನ್ಯಾ ಎಂಬವರು ಒಳಗೊಂಡಿದ್ದಾರೆ.