ಕರ್ನಾಟಕ ಮದ್ಯ ವಶ
ಉಪ್ಪಳ: ಬಂದ್ಯೋಡು ಮಾಣಿಹಿತ್ತಿಲಲ್ಲಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್ನ ಪ್ರಿವೆಂಟಿವ್ ಆಫೀಸರ್ ಮುರಳಿ ಕೆ.ವಿ.ಯವರ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೮.೧ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿದೆ. ಆದರೆ ಅದನ್ನು ಅಲ್ಲಿ ಬಚ್ಚಿಟ್ಟಿದ್ದ ವ್ಯಕ್ತಿಗಳ ಬಗ್ಗೆ ಮಾಹಿತಿ ಲಭಿಸಿಲ್ಲವೆಂದು ಅಧಿಕಾ ರಿಗಳು ತಿಳಿಸಿದ್ದಾರೆ. ವಶಪಡಿಸಲಾದ ಮಾಲನ್ನು ಕುಂಬಳೆ ಅಬಕಾರಿ ರೇಂಜ್ ಕಚೇರಿಗೆ ಹಸ್ತಾಂತರಿಸ ಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಸಿಇಒಗಳಾದ ಸೋನು ಸೆಬಾಸ್ಟಿ ಯನ್, ಶಿಜಿತ್ ವಿ.ವಿ, ವಿಜಿತ್ ಕೆ.ಆರ್. ಮತ್ತು ಚಾಲಕ ಕ್ರಿಸ್ಟಿನ್ ಪಿ.ಎ. ಎಂಬವರು ಒಳಗೊಂಡಿದ್ದರು.