ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ
ಕುಂಬಳೆ: ಕರ್ನಾಟಕ ಮದ್ಯ ಕೈವಶವಿರಿಸಿಕೊಂಡ ಆರೋಪದಂತೆ ಓರ್ವನನ್ನು ಕುಂಬಳೆ ರೇಂಜ್ ಅಬ ಕಾರಿ ಅಧಿಕಾರಿಗಳು ಸೆರೆಹಿಡಿದಿದ್ದಾರೆ.
ಮೀಂಜ-ಬೇರಿಕೆಯ ರಾಧಾಕೃಷ್ಣ(54) ಎಂಬಾತನನ್ನು ಬಂಧಿಸಿ 9.27 ಲೀಟರ್ ಕರ್ನಾಟಕ ಮದ್ಯ ವಶಪಡಿಸಲಾಗಿದೆ. ನಿನ್ನೆ ಸಂಜೆ ಮೀಯಪದವಿನಲ್ಲಿ ಕುಂಬಳೆ ರೇಂಜ್ ಎಕ್ಸೈಸ್ ಇನ್‌ಸ್ಪೆಕ್ಟರ್ ಮಾಥ್ಯು ಕೆ.ಡಿ, ಪ್ರಿವೆಂಟೀವ್ ಆಫೀಸರ್ ಮನಾಸ್ ಕೆ.ವಿ, ಸಿಇಒಗಳಾದ ರಂಜಿತ್ ಟಿ.ಕೆ, ಅಖಿಲೇಶ್ ಎಂ.ಎಂ, ಚಾಲಕ ಪ್ರವೀಣ್ ಎಂಬಿವರು ಕಾರ್ಯಾಚರಣೆ ನಡೆಸಿದ್ದಾರೆ.