ಕಲ್ಲಿಕೋಟೆಯಲ್ಲಿ ಪುತ್ರನಿಂದ ಇರಿತಕ್ಕೊಳಗಾಗಿ ತಂದೆ ಸಾವು

ಕಲ್ಲಿಕೋಟೆ: ಬಾಲುಶ್ಶೇರಿ ಪನಾಯಿಯಲ್ಲಿ ಪುತ್ರನಿಂದ ಇರಿತಕ್ಕೊಳಗಾಗಿ ತಂದೆ ಮೃತಪಟ್ಟರು. ಬಾಲುಶ್ಶೇರಿ ಚಾಣೋರ ಅಶೋಕನ್ (71) ಮೃತಪಟ್ಟವರು. ಆರೋಪಿಯಾದ ಪುತ್ರ ಸುಧೀಶ್‌ನನ್ನು ಸ್ಥಳೀಯರ ಸಹಾಯದೊಂದಿಗೆ ಬಾಲುಶ್ಶೇರಿ ಠಾಣೆಗೆ ಕೊಂಡೊಯ್ಯಲಾಗಿದೆ. 10 ವರ್ಷಗಳ ಹಿಂದೆ ಅಶೋಕನ್‌ರ ಪತ್ನಿಯನ್ನು ಕಿರಿಯ ಪುತ್ರ ಇರಿದು ಕೊಲೆಗೈದ ಬಳಿಕ ಆತ್ಮಹತ್ಯೆಗೈದಿದ್ದನು. ನಿನ್ನೆ ಸಂಜೆ ತಂದೆಯನ್ನು ಹಿರಿಯ ಪುತ್ರ ಇರಿದು ಕೊಲೆಗೈದಿದ್ದು, ರಾತ್ರಿ ಮನೆಯಲ್ಲಿ ಬೆಳಕು ಕಾಣದ ಹಿನ್ನೆಲೆಯಲ್ಲಿ ನೆರೆಮನೆಯವರು ಬಂದು ನೋಡಿದಾಗ ಮೃತಪಟ್ಟ ಸ್ಥಿತಿಯಲ್ಲಿ ಅಶೋಕನ್ ಕಂಡು ಬಂದಿದ್ದಾರೆ. ಮಧ್ಯಾಹ್ನದ ಮುಂಚಿತವಾಗಿಯೇ ಕೊಲೆ ನಡೆದಿರಬೇಕೆಂದು ಸ್ಥಳೀಯರು ಶಂಕಿಸಿದ್ದಾರೆ. ರಾತ್ರಿ ವೇಳೆ ಪುತ್ರ ಮನೆಗೆ ಬರುವಾಗ ಸ್ಥಳೀಯರು ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

RELATED NEWS

You cannot copy contents of this page