ಕಲ್ಲಿಕೋಟೆ ನಿವಾಸಿ ಸಹಿತ 11 ಮಂದಿಯ ಸಾವಿಗೆ ಕಾರಣವಾದ ಶಿರೂರು ದುರಂತಕ್ಕೆ 1 ವರ್ಷ
ಕಾಸರಗೋಡು: ಕಲ್ಲಿಕೋಟೆ ಬಳಿಯ ಕನ್ನಾಡಿಕಲ್ ನಿವಾಸಿಯಾದ ಲಾರಿ ಚಾಲಕ ಅರ್ಜುನ್ ಸಹಿತ 11 ಮಂದಿ ಸಾವಿಗೀಡಾದ ಶಿರೂರು ದುರಂತ ಸಂಭವಿಸಿ ಇಂದಿಗೆ 1 ವರ್ಷವಾಯಿತು. 2024 ಜುಲೈ 16ರಂದು ಧಾರಾಕಾರ ಮಳೆಗೆ ಶಿರೂರಿನಲ್ಲಿ ರಸ್ತೆ ಬದಿಯ ಗುಡ್ಡೆ ಕುಸಿದು ಬಿದ್ದು ದುರಂತ ಸಂಭವಿಸಿತ್ತು. 72 ದಿನಗಳ ಕಾಲ ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ ಅರ್ಜುನ್‌ರ ಮೃತದೇಹದ ಅವಶಿಷ್ಟಗಳು ಹಾಗೂ ಟ್ರಕ್ ಗಂಗಾವಲಿ ಹೊಳೆಯಲ್ಲಿ ಪತ್ತೆಯಾಗಿತ್ತು. ಅಪಘಾತದಲ್ಲಿ ಸಿಲುಕಿದ ಇಬ್ಬರನ್ನು ಇನ್ನು ಕೂಡಾ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಕರ್ನಾಟಕದ ಶಿರೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜುಲೈ 16ರಂದು ಬೆಳಿಗ್ಗೆ 8.15ರ ವೇಳೆ ದುರಂತ ಸಂಭವಿಸಿತ್ತು. ಮಣ್ಣು ಬಂಡೆಕಲ್ಲುಗಳ ಸಹಿತ ರಾಷ್ಟ್ರೀಯ ಹೆದ್ದಾರಿಗೆ ಅಪ್ಪಳಿಸಿದ್ದು, ಇದರಿಂದ ಒಂದು ಚಹಾದಂಗಡಿ ಹಾಗೂ ಮನೆಗಳು ನಾಶಗೊಂಡಿವೆ.