ಕಲ್ಲಿಕೋಟೆ ಮೆಡಿಕಲ್ ಕಾಲೇಜಿನಲ್ಲಿ ಅಸ್ಥಿಪಂಜರ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆ

ಕಲ್ಲಿಕೋಟೆ: ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಅಸ್ಥಿಪಂಜರ ಉಪೇಕ್ಷಿಸಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಮೆಡಿಕಲ್ ಕಾಲೇಜಿನ ತ್ಯಾಜ್ಯ ಸಂಸ್ಕರಣೆ ಪ್ಲಾಂಟ್‌ನ ಸಮೀಪ ನಿನ್ನೆ ಮಧ್ಯಾಹ್ನ ತಲೆ ಬುರುಡೆ ಹಾಗೂ ಅಸ್ಥಿಪಂಜರ ಪತ್ತೆಯಾಗಿದೆ. ದೊಡ್ಡದಾದ ಚೀಲದಲ್ಲಿ ಇದನ್ನು ಇರಿಸಲಾಗಿತ್ತು. ಬಳಿಕ ಸುರಕ್ಷಾ ನೌಕರರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮೆಡಿಕಲ್ ಕಾಲೇಜು ಪೊಲೀಸರು ಸ್ಥಳಕ್ಕೆ ತಲುಪಿ ತಪಾಸಣೆ ನಡೆಸಿದರು. ಅಸ್ಥಿಪಂಜರದಲ್ಲಿ ಮಾರ್ಕರ್ ಪೆನ್ನು ಉಪಯೋಗಿಸಿ ಗುರುತು ಹಾಕಲಾಗಿದೆ. ಕಲಿಕೆಯ ಅಗತ್ಯಕ್ಕಾಗಿ ಉಪಯೋಗಿಸಿರುವುದಾಗಿರಬೇಕೆಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ.

RELATED NEWS

You cannot copy contents of this page