ಕಳವು: ಸೆರೆಹಿಡಿಯಲು ಬಂದ ಪೊಲೀಸರ ಕೈಗೆ ಕಚ್ಚಿದ ಆರೋಪಿಗಳು

ಕಾಸರಗೋಡು: ಕಾರು ಕಳವು ಪ್ರಕರಣಕ್ಕೆ ಸಂಬಂಧಿಸಿ   ಬಂಧಿಸಲು ಹೋದ ಪೊಲೀಸರ ಕೈಗೆ ಆರೋಪಿಗಳು ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ. ಎರ್ನಾಕುಳಂ ಕೋದ ಮಂಗಲ ನಿವಾಸಿಗಳಾದ  ಮೊಹಮ್ಮದ್ ಫೈಸಲ್ (೨೩), ಮುನ್ನಾ ಅಲಿಯಾಸ್ ಕೆ.ಎನ್. ರಾಹುಲ್ (೨೮), ಆಕಾಶ್ ಅಲಿಯಾಸ್ ಕರಿಂಞ (೨೧) ಎಂಬವರು ಈ ಕಳವು ಪ್ರಕರಣದ ಆರೋಪಿಗಳಾಗಿದ್ದಾರೆ. ಮಾರ್ಚ್ ೪ರಂದು ಕಣ್ಣೂರು ಕುರುವಾ ಪಾಲ ಬಳಿಯ ಅಬೂಬಕ್ಕರ್ ಸಿದ್ದಿಕ್ ಎಂಬವರ ಕಾರನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಈ ಮೂವರ  ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಅದರಂತೆ ಅವರನ್ನು ಪೊಲೀಸರು ಸೆರೆಹಿಡಿಯಲು ಹೋದಾಗ ಆರೋಪಿಗಳು ಪೊಲೀಸರ ಮೇಲೆರಗಿ ಕಚ್ಚಿ ಗಾಯಗೊಳಿ ಸಿದರು. ನಂತರ ಪೊಲೀಸರು ಅವರನ್ನು ಬಂಧಿಸಿ ದ್ದಾರೆ. ಇವರು ಕೊಲೆ, ಮಾದಕ ದ್ರವ್ಯ ಇತ್ಯಾದಿ ಪ್ರಕರಣಗಳಲ್ಲೂ ಆರೋಪಿಗಳಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.  ಕಾರು   ಕಳವುಗೈದ ಬಳಿಕ ಆರೋಪಿಗಳು ಮಾಸ್ಕ್ ಧರಿಸಿ ರೈಲಿನಲ್ಲಿ ನೇರವಾಗಿ ಕಾಸರಗೋಡಿಗೆ ಬಂದಿದ್ದರು. ಅಲ್ಲಿಂದ ಅವರು ಕಣ್ಣೂರಿಗೆ ಹಿಂತಿರುಗುವ ದಾರಿ ಮಧ್ಯೆ  ಅವರನ್ನು ಪೊಲೀಸರು ಬಂಧಿಸಿದ್ದಾರೆ.

RELATED NEWS

You cannot copy contents of this page