ಕಳ್ಳನೋಟು ಪ್ರಕರಣ: ಮಹಿಳೆ ಕಸ್ಟಡಿಗೆ

ಕಣ್ಣೂರು:  500 ರೂಪಾ ಯಿಗಳ ಕಳ್ಳನೋಟು ಚಲಾವಣೆ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಯನ್ನು ಪೊಲೀಸರು ಕಸ್ಟಡಿಗೆ ತೆಗೆದು ತನಿಖೆಗೊಳಪಡಿಸುತ್ತಿದ್ದಾರೆ. ಚೆರುಪಳ ಪಾಡಿಯೋಟ್‌ಚಾಲ್ ನಿವಾಸಿ ಶೋಭಾ (43) ಎಂಬಾಕೆ ಂiiನ್ನು ಕಣ್ಣೂರು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.  ಇದೇ ಪ್ರಕರಣಕ್ಕೆ  ಸಂಬಂಧಿಸಿ ಪಯ್ಯನ್ನೂರು ಕಂಡೋತ್ ನಿವಾಸಿಯಾದ ಮೋಟಾರು ಮೆಕ್ಯಾನಿಕ್ ಎಂ.ಎ. ಶಿಜು (36) ಎಂಬಾತನನ್ನು ನಿನ್ನೆ ಸೆರೆಹಿಡಿದಿದ್ದು ಆತನನ್ನು ತನಿಖೆಗೊಳಪಡಿಸಿದಾಗ ಶೋಭಾಳ ಕುರಿತು ಮಾಹಿತಿ ಲಭಿಸಿದೆ. ಶೋಭಾ ಅಸಿಂಧುಗೊಳಿಸಲಾದ 2000 ರೂಪಾಯಿಗಳ ನೋಟನ್ನು ಶಿಜುವಿಗೆ ನೀಡಿ ಅದರ ಬದಲಾಗಿ 500 ರೂ.ಗಳ ಕಳ್ಳನೋಟು ಪಡೆದಿದ್ದ ಳೆಂದು ತಿಳಿದುಬಂದಿದೆ.  ಇದೇ ವೇಳೆ ನಿನ್ನೆ ಚೀಮೇನಿಯ ಪೆಟ್ರೋಲ್ ಬಂಕ್ ಗೆ ತಲುಪಿದ ಶೋಭಾ ತನ್ನ ಕಾರಿಗೆ ಪೆಟ್ರೋಲ್ ತುಂಬಿಸಿ  ೫೦೦ ರೂಪಾಯಿಯ ಕಳ್ಳನೋಟು ನೀಡಿದ್ದಳು.   ಕೂಡಲೇ  ಪೆಟ್ರೋಲ್ ಪಂಪ್ ನೌಕರರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆಕೆಯನ್ನು ಪೊಲೀಸರು ಕಸ್ಟಡಿಗೆ ತೆಗೆದು ವಿಚಾರಣೆ ನಡೆಸಿದ್ದರು. ಬಳಿಕ ಶಿಜು ನೀಡಿದ ಮಾಹಿತಿಯಂತೆ ಶೋಭಾಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾ ಗಿದೆ. ಬಳಿಕ ಆಕೆಯ ಮನೆಯಲ್ಲಿ ಪೊಲೀಸರು ಪರಿಶೀಲಿಸಿದಾಗ 2000 ರೂಪಾಯಿಗಳ ಅಸಿಂಧುನೋಟು ಪತ್ತೆಯಾಗಿದೆ.  ಇದೇ ಕಳ್ಳನೋಟು ಪ್ರಕರಣಕ್ಕೆ ಸಂಬಂಧಿಸಿ ಪಾಲಕ್ಕಾಡ್ ನಿವಾಸಿಯಾದ ಇನ್ನೋರ್ವನಿಗಾಗಿ ಶೋಧ ನಡೆಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page