ಕಳ್ಳಭಟ್ಟಿ ಸಾರಾಯಿ, ೬೦ ಲೀಟರ್ ವಾಶ್ ವಶ

ಮುಳ್ಳೇರಿಯ: ಬದಿಯಡ್ಕ ಮದ್ಯ ಅಬಕಾರಿ ರೇಂಜ್‌ನ ಅಬಕಾರಿ ಇನ್ಸ್‌ಪೆಕ್ಟರ್ ಎಚ್. ಬಿನು ಅವರ ನೇತೃತ್ವದ ಅಬಕಾರಿ ತಂಡ ಮುಳ್ಳೇರಿಯಾ ಅರಣ್ಯ ವಲಯದಲ್ಲಿ  ನಡೆಸಿದ  ತಪಾಸಣೆಯಲ್ಲಿ ಅಲ್ಲಿ ಬಚ್ಚಿಡ ಲಾಗಿದ್ದ ೧೦ ಲೀಟರ್ ಕಳ್ಳಭಟ್ಟಿ ಸಾರಾಯಿ ಮತ್ತು ೬೦ ಲೀಟರ್ ಹುಳಿರಸ (ವಾಶ್) ಪತ್ತೆಹಚ್ಚಿದೆ. ಬಳಿಕ ಮಾಲುಗಳನ್ನು ಅಲ್ಲೇ ನಾಶಗೊಳಿಸಲಾಯಿತು. ಇದು ಕ್ರಿಸ್ಮಸ್ ಮತ್ತು ಹೊಸವರ್ಷ ಆಚರಣೆಯ ವೇಳೆ ವಿತರಿಸಲು ಬಚ್ಚಿಡಲಾಗಿದ್ದ ಮಾಲುಗಳಾಗಿ ದ್ದುವೆಂದ,   ಈ ಮಾಲುಗಳನ್ನು ಅಲ್ಲಿ ಬಚ್ಚಿಟ್ಟವರ ಪತ್ತೆಗಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

You cannot copy contents of this page