ಕಾಂಗ್ರೆಸ್ ನೇತಾರ ಕುಂಟಾರು ಬಾಲನ್ ಕೊಲೆಪ್ರಕರಣ: ಒಂದನೇ ಆರೋಪಿಗೆ ಜೀವಾವಧಿ ಸಜೆ, ಜುಲ್ಮಾನೆ
ಕಾಸರಗೋಡು: ಕಾಂಗ್ರೆಸ್‌ನ ಕಾರಡ್ಕ ಮಂಡಲ ನೇತಾರ ಆದೂರು ಕುಂಟಾರಿನ ಟಿ. ಬಾಲಕೃಷ್ಣನ್ ಅಲಿಯಾಸ್ ಕುಂಟಾರು ಬಾಲನ್ (೪೫)ರನ್ನು ಕೊಲೆಗೈದ ಪ್ರಕರಣದ ಒಂದನೇ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶರಾದ ಕೆ. ಪ್ರಿಯಾ ಅವರು ಜೀವಾವಧಿ ಸಜೆ ಹಾಗೂ ಎರಡು ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.
ಈ ಪ್ರಕರಣದ ಆರೋಪಿ ಆದೂರು ಕುಂಟಾರಿನ ಒಬಿ ರಾಧಾ (ರಾಧಾಕೃಷ್ಣನ್-೪೭)ನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿ ದ್ದಲ್ಲಿ ಆರೋಪಿ ನಾಲ್ಕು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಈ ಪ್ರಕರಣದ ಇತರ ಆರೋಪಿಗಳಾದ ಆದೂರು ಕಟ್ಟತ್ತಬೈಲಿನ ವಿಜಯನ್ (೪೨) ಕುಂಟಾಪರಿನ ಕೆ. ಕುಮಾರ್ (೪೨), ಕುಂಟಾರು ಅತ್ತನಾಡಿ ಹೌಸಿನ ಕೆ. ದಿಲೀಪ್ ಕುಮಾರ್ (೪೧) ಎಂಬವರ ಮೇಲಿನ ಆರೋಪ ವಿಚಾರಣೆಯಲ್ಲಿ ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ ನ್ಯಾಯಾಲಯ ಮೊನ್ನೆ ಅವರನ್ನು ಖುಲಾಸೆಗೊಳಿಸಿ ತೀರ್ಪು ನೀಡಿತ್ತು.
೨೦೦೮ ಮಾರ್ಚ್ ೨೭ರಂದು ರಾತ್ರಿ ೭ಕ್ಕೆ ಕುಂಟಾರು ಬಾಲನ್ ತಮ್ಮ ಸ್ನೇಹಿತರ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಾರಿ ಮಧ್ಯೆ ಕುಂಟಾರು ಬಸ್ ತಂಗುದಾಣದ ಬಳಿ ಅಕ್ರಮಿಗಳು ಕಾರನ್ನು ತಡೆದು ನಿಲ್ಲಿಸಿ ಬಾಲನ್‌ರನ್ನು ಕಾರಿನಿಂದ ಹೊರಕ್ಕೆ ಎಳೆದು ಹಾಕಿ ಬರ್ಬರವಾಗಿ ಕೊಲೆಗೈದಿತ್ತು. ಮೊದಲು ಈ ಪ್ರಕರಣದ ತನಿಖೆಯನ್ನು ಆದೂರು ಪೊಲೀಸರು ನಡೆಸಿದ್ದರು. ನಂತರ ತನಿಖೆಯನ್ನು ಕ್ರೈಮ್ ಬ್ರಾಂಚ್ ಪೊಲೀಸ್ ವಿಭಾಗಕ್ಕೆ ಹಸ್ತಾಂತರಿಸಲಾಗಿತ್ತು. ನಂತರ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲು ಸರಕಾರ ತೀರ್ಮಾನಿಸಿದ್ದರೂ ಕೆಲವೊಂ ದು ತಾಂತ್ರಿಕ ಕಾರಣದಿಂದ ತನಿಖೆ ಯನ್ನು ಸಿಬಿಐ ಕೈಗೆತ್ತಿಕೊಂಡಿರಲಿಲ್ಲ. ಇದರಿಂದಾಗಿ ಕ್ರೈಮ್ ಬ್ರಾಂಚ್ ತನಿಖೆ ಮುಂದುವರಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಪ್ರೋಸಿಕ್ಯೂಷನ್ ಪರ ಮೊದಲ ಹಂತದಲ್ಲಿ ಹೆಚ್ಚುವರಿ ಸರಕಾರಿ ಪಬ್ಲಿಕ್ ಪ್ರೋಸಿಕ್ಯೂಟರ್ ಅಬ್ದುಲ್ ಸತ್ತಾರ್ ಹಾಗೂ ನಂತರ ಹೆಚ್ಚುವರಿ ಸರಕಾರಿ ಪಬ್ಲಿಕ್ ಪ್ರೋಸಿಕ್ಯೂಟರ್ ಜಿ. ಚಂದ್ರ ಮೋಹನ್ ಮತ್ತು ಚಿತ್ರಕಲ ವಾದಿಸಿದ್ದರು.
ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಮುಂದಾದ ಕುಂಟಾರು ಬಾಲನ್ ಕುಟುಂಬ
ಮುಳ್ಳೇರಿಯ: ಕಾಂಗ್ರೆಸ್ ನೇತಾರ ಕುಂಟಾರು ಬಾಲನ್ ಕೊಲೆ ಪ್ರಕರಣದ ಆರೋಪಿಗಳ ಪೈಕಿ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿ ನೀಡಲಾದ ತೀರ್ಪಿನ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಕುಂಟಾರು ಬಾಲನ್‌ರ ಕುಟುಂಬ ಮುಂದಾಗಿದೆ.
ಈ ಕೊಲೆ ಪ್ರಕರಣದ ಒಂದನೇ ಆರೋಪಿ ಒಬಿ ರಾಧಾ (ರಾಧಾಕೃಷ್ಣನ್-೪೭)ನಿಗೆ ನ್ಯಾಯಾಲಯ ಜೀವಾವಧಿ ಸಜೆ ಹಾಗೂ ೨ ಲಕ್ಷರೂ. ಜುಲ್ಮಾನೆ ವಿಧಿಸಿತ್ತು. ಇತರ ಮೂವರು ಆರೋಪಿಗಳಾದ ವಿಜಯನ್ (೪೨), ಕೆ. ಕುಮಾರನ್ (೫೧) ಮತ್ತು ದಿಲೀಪ್ ಕುಮಾರ್ (೪೨)ರನ್ನು ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿತ್ತು.
ಈ ಪ್ರಕರಣದ ತನಿಖೆಯನ್ನು ಪೊಲೀಸರು ಸರಿಯಾಗಿ ನಡೆಸಿಲ್ಲವೆಂದೂ, ಖುಲಾಸೆಗೊಳಿಸಲ್ಪಟ್ಟ ಆರೋಪಿಗಳ ವಿರುದ್ಧ ಸಾಕ್ಷಿದಾರರು ಪೊಲೀಸರಲ್ಲಿ ಹೇಳಿಕೆ ನೀಡಿದ್ದರೂ ಪೊಲೀಸರು ಅದನ್ನು ದಾಖಲಿಸಿ ಕೊಂಡಿಲ್ಲ. ಮಾತ್ರವಲ್ಲ ಕೊಲೆ ನಡೆದ
ದಿನದಂದು ಇರಿತಕ್ಕೊಳಗಾದ ಬಾಲನ್ ಸಾವನ್ನ ಪ್ಪುವ ಮೊದಲು ತಮಗೆ ಇರಿದವರ ಬಗ್ಗೆ ಪೊಲೀಸರಲ್ಲಿ ತಿಳಿಸಿದ್ದರು. ಆದರೆ ಪೊಲೀಸರು ಈ ಬಗ್ಗೆ ಸರಿಯಾದ ತನಿಖೆ ನಡೆಸಿರಲಿ ಲ್ಲವೆಂದು ಬಾಲನ್‌ರ ಕುಟುಂಬದವರು ದೂರಿದ್ದಾರೆ. ಆದ್ದರಿಂದ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವರು ತೀರ್ಮಾನಿಸಿದ್ದಾರೆ.