ಕಾಂಗ್ರೆಸ್ ಭಿನ್ನಮತ ಪರಿಹರಿಸಲು  ದಿಲ್ಲಿಯಲ್ಲಿ ಇಂದು ತುರ್ತು ಸಭೆ

ನವದೆಹಲಿ: ಕಾಂಗ್ರೆಸ್‌ನ ಕೇರಳ ಘಟಕದಲ್ಲಿ ನಾಯಕತ್ವ ಬದಲಾವಣೆಗಿ ರುವ ಬೇಡಿಕೆಯನ್ನು ಪಕ್ಷದ ಕೆಲವು ರಾಜ್ಯ ನೇತಾರರು ಮುಂದಿರಿಸಿ, ಆ ವಿಷಯದಲ್ಲಿ ಪಕ್ಷದ ರಾಜ್ಯ ಘಟಕದಲ್ಲಿ ತಲೆದೋರಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು  ಕಾಂಗ್ರೆಸ್ ಹೈಕಮಾಂಡ್ ದಿಲ್ಲಿಯಲ್ಲಿ ಇಂದು  ಪಕ್ಷದ ಕೇರಳ ಘಟಕದ ನಾಯಕರ ತುರ್ತು ಸಭೆ ಕರೆದಿದೆ.

ಚರ್ಚೆಯಲ್ಲಿ ಭಾಗವಹಿಸಲು ಕಾಂಗ್ರೆಸ್‌ನ ಹೆಚ್ಚಿನ ಎಲ್ಲಾ ನೇತಾರರು ಈಗಾಗಲೇ ದಿಲ್ಲಿಗೆ ತಲುಪಿದ್ದಾರೆ. ಸಭೆಯಲ್ಲಿ ತಾನೂ ಭಾಗವಹಿಸುವುದಾಗಿ ಇನ್ನೊಂದೆಡೆ ಪಕ್ಷದ  ರಾಜ್ಯ ನೇತೃತ್ವ ದೊಂದಿಗೆ ಸೆಟೆದು  ನಿಂತಿರುವ ತಿರುವ ನಂತಪುರ ಸಂಸದ ಶಶಿ ತರೂರ್ ಹೇಳಿದ್ದಾರೆ. ಆದರೆ ಇಂದಿನ ಸಭೆಯಲ್ಲಿ ನಾನು ಭಾಗವಹಿಸುವುದಿಲ್ಲವೆಂದು ಕಾಂಗ್ರೆಸ್‌ನ ಮಾಜಿ  ರಾಜ್ಯಾಧ್ಯಕ್ಷ ಕೆ. ಮುರಳೀ ಧರನ್ ಮತ್ತು  ಇನ್ನೋರ್ವ ನೇತಾರ  ಮುಲ್ಲಪ್ಪಳ್ಳಿ ರಾಮಚಂದ್ರನ್  ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯ ವರಿಗೆ ಈಗಾಗಲೇ ತಿಳಿಸಿದ್ದಾರೆ.

ಆದರೆ ದಿಲ್ಲಿಯಲ್ಲಿ ಕರೆಯಲಾದ ತುರ್ತು ಸಭೆಯಲ್ಲಿ  ಪಕ್ಷದ ಕೇರಳ ಘಟಕದ ನೇತೃತ್ವ ಬದಲಾವಣೆ ಪ್ರಧಾನ ಚರ್ಚಾ ವಿಷಯವಲ್ಲವೆಂದೂ ರಾಜ್ಯದಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸಲು ಅನುಸರಿಸಬೇಕಾಗಿರುವ ಕಾರ್ಯತಂತ್ರಗಳಿಗೆ ರೂಪು ನೀಡುವುದೇ ಪ್ರಧಾನ ಚರ್ಚಾ ವಿಷಯವಾಗಲಿದೆ ಎಂದು  ಪಕ್ಷದ ಕೇಂದ್ರ ನೇತಾರರು ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆ. ಸುಧಾಕರನ್‌ರನ್ನು ಬದಲಾಯಿ ಸುವ ಬೇಡಿಕೆಗೆ  ಪಕ್ಷದ ಹಿರಿಯ ನಾಯಕ  ಮುಲ್ಲಪ್ಪಳ್ಳಿ  ರಾಮಚಂ ದ್ರನ್ ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ ನೇತೃತ್ವ ಸ್ಥಾನ ದಿಂದ ಕೆ. ಸುಧಾಕರನ್‌ರನ್ನು ಬದಲಾ ಯಿಸುವ ಅಗತ್ಯವಿಲ್ಲವೆಂದು ವಿರೋಧ ಪಕ್ಷ ನಾಯಕ ವಿ.ಡಿ. ಸತೀಶನ್ ಮತ್ತು ಕೆ. ಮುರಳೀಧರನ್ ಇನ್ನೊಂದೆಡೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಆದರೆ ಸಂದಿಗ್ದಾವಸ್ಥೆಯ ವೇಳೆ ಎಲ್ಲರೊಂದಿಗೂ ಸಮಾಲೋಚನೆ ನಡೆಸಿ ಮತ್ತೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಾಗಿದೆ. ಪಕ್ಷದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಮುನ್ನಡೆಸಲು ಸಮರ್ಥವಾ ಗಿರುವ ನೇತಾರರನ್ನು ಪಕ್ಷದ ಅಧ್ಯಕ್ಷರ ನ್ನಾಗಿಸಬೇಕೆಂದು ಮುಲ್ಲಪಳ್ಳಿ ರಾಮ ಚಂದ್ರನ್ ಹೇಳಿದ್ದಾರೆ. ಅಂತೂ ಇಂದು ದಿಲ್ಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಈ ವಿಷಯದಲ್ಲಿ ಪಕ್ಷದ ಹೈಕಮಾಂಡ್‌ನ  ಸಹಮತ  ತಳೆಯುವ ನಿಲುವು ನಿರ್ಣಾಯಕವಾಗಲಿದೆ.

Leave a Reply

Your email address will not be published. Required fields are marked *

You cannot copy content of this page