ಕಾಞಂಗಾಡ್ ನಗರಸಭೆಯ ಹಳೆಯ ಬಸ್ ನಿಲ್ದಾಣ ಕಟ್ಟಡದಲ್ಲಿ ಬಿರುಕು: ಪ್ರವೇಶ ನಿಷೇಧ

ಹೊಸದುರ್ಗ: ಕಾಞಂಗಾಡ್ ನಗರಸಭೆಯ ಹಳೆ ಬಸ್ ನಿಲ್ದಾಣ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಬಿರುಕು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ  ಬಸ್ ನಿಲ್ದಾಣಕ್ಕಿರುವ ಪ್ರವೇಶ ಕವಾಟವನ್ನು ಪೊಲೀಸರು ಮುಚ್ಚಿದರು. ಬಸ್ ನಿಲ್ದಾಣದ, ಶಾಪಿಂಗ್ ಕಾಂಪ್ಲೆಕ್ಸ್ ಪರಿಸರದಲ್ಲಿ ಜನರು ನಿಲ್ಲಬಾರದೆಂದು ಸೂಚನೆ ನೀಡಿದ್ದಾರೆ. ಇಂದು ಬೆಳಿಗ್ಗೆ ಬಸ್ ನಿಲ್ದಾಣದ ಪ್ರವೇಶ ಕವಾಟದ ಬಳಿ ಬಿರುಕು ಮೂಡಿರುವುದು ಕಂಡು ಬಂದಿದೆ. ಇದನ್ನು ಕೂಡಲೇ ಪೊಲೀಸರಿಗೆ ತಿಳಿಸಲಾಗಿದ್ದು, ಅವರು ಬಂದು ಪ್ರವೇಶದ್ವಾರದಲ್ಲಿ ಸಂಚಾರ ನಿಷೇಧಿಸಿದ್ದಾರೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page