ಕಾಡಾನೆ ದಾಳಿಗೆ ದಂಪತಿ ಬಲಿ: ಆರಳಂ ಪಂ.ನಲ್ಲಿ ಬಿಜೆಪಿ, ಯುಡಿಎಫ್ ಹರತಾಳ
ಕಣ್ಣೂರು: ರಾಜ್ಯದಲ್ಲಿ ಕಾಡಾನೆ ದಾಳಿಯಿಂದ ಮತ್ತಿಬ್ಬರು ಸಾವಿಗೀಡಾಗಿ ದ್ದಾರೆ. ಕಣ್ಣೂರು ಆರಳಂ ಫಾರಂನ ಹದಿಮೂರನೇ ಬ್ಲೋಕ್‌ನ ವೆಳ್ಳಿ, ಪತ್ನಿ ಲೀಲಾ ಎಂಬವರು ಸಾವಿಗೀಡಾದವರು. ನಿನ್ನೆ ಸಂಜೆ ತೋಟದಲ್ಲಿ ಗೇರುಬೀಜ ಸಂಗ್ರಹಿಸುತ್ತಿದ್ದಾಗ ಇವರ ಮೇಲೆ ಕಾಡಾನೆ ದಾಳಿ ನಡೆಸಿದೆ. ಈ ಭಾಗದಲ್ಲಿ ನಿರಂತರ ಕಾಡಾನೆ ದಾಳಿ ನಡೆಸುತ್ತಿರುವು ದಾಗಿ ಹೇಳಲಾ ಗುತ್ತಿದೆ. ಜನರ ಭಾರೀ ಪ್ರತಿಭಟ ನೆಯ ಬಳಿಕ ನಿನ್ನೆ ಮಧ್ಯಾಹ್ನ ವೆಳ್ಳಿ, ಲೀಲರ ಮೃತದೇಹವನ್ನು ಪರಿಯಾರಂ ಮೆಡಿಕಲ್ ಕಾಲೇಜು ಅಸ್ಪತ್ರೆಗೆ ಕೊಂಡೊಯ್ಯಲಾಯಿತು.
ಸಬ್ ಕಲೆಕ್ಟರ್ ಸ್ಥಳಕ್ಕೆ ತಲುಪಿದ್ದರೂ ಆಂಬುಲೆನ್ಸ್‌ಗೆ ನಾಗರಿಕರು ತಡೆಯೊಡ್ಡಿದ್ದರು. ಬಳಿಕ ಪೊಲೀಸರು ನಡೆಸಿದ ಚರ್ಚೆ ಬಳಿಕ ನಾಗರಿಕರನ್ನು ಸಮಾಧಾನಪಡಿ ಸಲಾಯಿತು.
ಇದೇ ವೇಳೆ ಕಾಡಾನೆ ದಾಳಿ ಯಿಂದ ದಂಪತಿ ಸಾವಿಗೀಡಾದ ಘಟನೆ ಯನ್ನು ಪ್ರತಿಭಟಿಸಿ ಬಿಜೆಪಿ ಹಾಗೂ ಯುಡಿಎಫ್ ಇಂದು ಆರಳಂ ಪಂಚಾ ಯತ್‌ನಲ್ಲಿ ಹರತಾಳ ನಡೆಸುತ್ತಿದೆ.
ಕಾಡಾನೆ ದಾಳಿಯ ಹಿನ್ನೆಲೆಯಲ್ಲಿ ಇಂದು ಸಂಜೆ ಕಣ್ಣೂರು ಜಿಲ್ಲಾ ದುರಂತ ನಿವಾರಣಾ ಅಥೋರಿಟಿ ಸರ್ವಪಕ್ಷ ಸಭೆ ನಡೆಯಲಿದ್ದು, ಅರಣ್ಯಖಾತೆ ಸಚಿವ ಎ.ಕೆ. ಶಶೀಂದ್ರನ್ ಭಾಗವಹಿಸುವರು.