ಕಾಡು ಹಂದಿಗೆ ಬೈಕ್ ಢಿಕ್ಕಿ ಹೊಡೆದು ಇಬ್ಬರಿಗೆ ಗಾಯ

ಕುಂಬಳೆ: ರಸ್ತೆಗೆ ಅಡ್ಡವಾಗಿ  ಓಡಿದ ಕಾಡು ಹಂದಿಗೆ ಢಿಕ್ಕಿ ಹೊಡೆದು ಬೈಕ್ ಮಗುಚಿ ಬಿದ್ದು ಇಬ್ಬರು ಗಾಯಗೊಂಡ ಘಟನೆ ನಡೆದಿದೆ. ಕೊಡ್ಯಮ್ಮೆ ನಿವಾಸಿ ಸಿನಾನ್ (೧೯), ಅನ್‌ಶಿತ್ (೧೬) ಎಂಬಿವರು ಗಾಯಗೊಂಡವರಾಗಿ ದ್ದಾರೆ. ನಿನ್ನೆ ಮುಂಜಾನೆ ೫.೩೦ರ ವೇಳೆ ಕಂಚಿಕಟ್ಟೆಯಲ್ಲಿ ಘಟನೆ ನಡೆ ದಿದೆ. ಈ ಇಬ್ಬರು ಆಟ ಮುಗಿದು ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ಕಂಚಿಕಟ್ಟೆಯಲ್ಲಿ ಕಾಡು ಹಂದಿ ರಸ್ತೆಗೆ ಅಡ್ಡವಾಗಿ ಓಡಿದೆ. ಈ ವೇಳೆ ಅದಕ್ಕೆ ಬೈಕ್ ಢಿಕ್ಕಿ ಹೊಡೆ ದಿದೆ. ಇತ್ತೀಚೆಗೆ ಕಂಚಿಕಟ್ಟೆಯಲ್ಲಿ ಡಜನ್‌ನಷ್ಟು ಕಾಡು ಹಂದಿಗಳು ರಸ್ತೆಯಲ್ಲಿ ಕಂಡು ಬಂದಿದ್ದವು. ಇದರಿಂದಾಗಿ ನಾಗರಿಕರು ಭಯಗೊಂಡಿರುವಾಗಲೇ ಈ ಘಟನೆ ನಡೆದಿದೆ.

You cannot copy contents of this page