ಕಾನತ್ತೂರು ಸಮೀಪ ಮತ್ತೆ ಚಿರತೆ ಪ್ರತ್ಯಕ್ಷ
ಮುಳ್ಳೇರಿಯ: ಕಾನತ್ತೂರು ಸಮೀಪ ನಿನ್ನೆ ಹಾಡಹಗಲೇ ಚಿರತೆ ಕಂಡುಬಂದಿರುವುದಾಗಿ ವರದಿ ಯಾಗಿದೆ. ತೈರ ಎಂಬಲ್ಲಿನ ಪುಷ್ಪಾರ ಮನೆ ಸಮೀಪ ನಿನ್ನೆ ಬೆಳಿಗ್ಗೆ ನೆರೆಮನೆ ನಿವಾಸಿಯಾದ ಗಂಗಾಧರನ್ ಎಂಬವರು ಚಿರತೆ ಯನ್ನು ಕಂಡಿದ್ದಾರೆನ್ನಲಾಗಿದೆ. ವಿಷಯ ತಿಳಿದು ಅರಣ್ಯಾಧಿಕಾರಿಗಳು ತಲುಪಿ ಶೋಧ ಆರಂಭಿಸಿದ್ದಾರೆ. ಈ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಚಿರತೆ ಕಾಣಿಸಿಕೊಂಡಿದೆ. ಮೊನ್ನೆ ಕೂಡಾ ಈ ಭಾಗದಲ್ಲಿ ಚಿರತೆ ಇತ್ತೆನ್ನಲಾಗಿದೆ. ಒಂದು ದೊಡ್ಡ ಚಿರತೆ ಹಾಗೂ ಎರಡು ಮರಿಗಳನ್ನು ಕಂಡಿರುವುದಾಗಿ ನಾಗರಿಕರು ತಿಳಿಸಿದ್ದಾರೆ.