ಕಾರಿಗೆ ಬೆಂಕಿ ತಗಲಿ ಯುವಕ ಮೃತ್ಯು
ಮಾವೇಲಿಕ್ಕರ: ಕಾರು ಬೆಂಕಿ ಗಾಹುತಿಯಾಗಿ ಯುವಕ ಮೃತಪಟ್ಟ ಘಟನೆ ಮಾವೇಲಿಕ್ಕರ ಕಂಡಿಯೂರ್ ಎಂಬಲ್ಲಿ ನಡೆದಿದೆ. ಕಾರು ಚಲಾಯಿಸಿದ ಮಾವೇಲಿಕ್ಕರ ಪುಳಿಮೂಡ್ ಎಂಬಲ್ಲಿನ ಬಾಡಿಗೆ ಮನೆಯಲ್ಲಿ ವಾಸಿಸುವ ಕೃಷ್ಣಪ್ರಕಾಶ್ ಯಾನೇ ಕಣ್ಣನ್ (೩೫) ಮೃತ ದುರ್ದೈವಿ. ಇಂದು ಮುಂಜಾನೆ ೧೨.೩೦ರ ವೇಳೆ ಅಪಘಾತ ಉಂಟಾ ಗಿದೆ. ಕಾರನ್ನು ಮನೆಯತ್ತ ಚಲಾಯಿ ಸುತ್ತಿದ್ದಂತೆ ಭಾರೀ ಶಬ್ದದೊಂದಿಗೆ ಸ್ಫೋಟ ಸಂಭವಿಸಿದೆ. ಕೂಡಲೇ ಬೆಂಕಿ ಹತ್ತಿಕೊಂಡಿದ್ದು, ಇದರಿಂದ ಕೃಷ್ಣಪ್ರಕಾಶ್ ಗಂಭೀರ ಸುಟ್ಟು ಗಾಯಗೊಂಡಿದ್ದರು. ಕೂಡಲೇ ಅಗ್ನಿಶಾಮಕ ದಳ ತಲುಪಿ ಬೆಂಕಿ ನಂದಿಸಿದ್ದು, ಆದರೆ ಗಂಭೀರ ಗಾಯಗೊಂಡ ಕೃಷ್ಣಪ್ರಕಾಶ್‌ರ ಜೀವ ರಕ್ಷಿಸಲಾಗಲಿಲ್ಲ.