ಕಾಸರಗೋಡು: ಪೆರಿಯಾಟ್ಟಡ್ಕದಲ್ಲಿ ಹೊಸದುರ್ಗ ಎಕ್ಸೈಸ್ ಸರ್ಕಲ್ ಇನ್ಸ್‌ಪೆಕ್ಟರ್ ದಿಲೀಶ್ ಎಂ. ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 84.4 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.
ಇದಕ್ಕೆ ಸಂಬಂಧಿಸಿ ಕುಂಬಳೆಗೆ ಸಮೀಪದ ಬಂಬ್ರಾಣ ಕಳತ್ತೂರು ತಪಾಸಣಾ ಕೇಂದ್ರ ಬಳಿಯ ಪ್ರವೀಣ್ ಕುಮಾರ್ ಮತ್ತು ಬಂಬ್ರಾಣ ಕಿದೂರಿನ ಮಿತೇಶ್ ಎಂಬಿವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಮಾಲು ಸಾಗಿಸಲು ಬಳಸಿದ ಕಾರನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಅಸಿ ಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ರಾಜೀ ವನ್ ಎಂ, ಪ್ರಿವೆಂಟಿವ್ ಆಫೀಸರ್ (ಗ್ರೇಡ್) ಪಿ.ಕೆ. ಬಾಬು ರಾಜ್, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಮನೋ ಜ್, ಪಿ. ಸಿಜು, ಚಾಲಕ ದಿಜಿತ್ ಮತ್ತು ಸನಲ್ ಎಂಬವರು ಒಳಗೊಂಡಿದ್ದರು.