ಕಾರಿನಲ್ಲಿ ಸಾಗಿಸುತ್ತಿದ್ದ ೧೪೦ ಕಿಲೋ ತಂಬಾಕು ಉತ್ಪನ್ನ ವಶ

ಮಂಜೇಶ್ವರ: ಕಾರಿನಲ್ಲಿ ಕಾಸರಗೋಡಿನತ್ತ ಸಾಗಿಸುತ್ತಿದ್ದ ನಿಷೇಧಿತ ೧೪೦ ಕಿಲೋ ತಂಬಾಕು ಉತ್ಪನ್ನಗಳನ್ನು ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕಾಸರಗೋಡು ಕೂಡ್ಲು ಫೌಸಿಯಾ ಮಂಜಿಲ್‌ನ ಇರ್ಫಾನ್ (೩೩) ಎಂಬಾತನನ್ನು ಬಂಧಿಸಲಾಗಿದೆ. ಈತ ಈ ಹಿಂದೆಯೂ ೯೦ ಕಿಲೋ ತಂಬಾಕು ಉತ್ಪನ್ನಗಳ ಸಹಿತ ಇದೇ ಚೆಕ್‌ಪೋಸ್ಟ್‌ನಲ್ಲಿ ಸೆರೆಗೀಡಾಗಿದ್ದನು. ಇದೀಗ ವಶಪಡಿಸಿಕೊಂಡ ತಂಬಾಕು ಉತನ್ನಗಳಿಗೆ ೨ ಲಕ್ಷ ರೂಪಾಯಿ ಮೌಲ್ಯ ಅಂದಾಜಿಸಲಾಗಿದೆ. ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಎಂ. ಯೂನಸ್, ಪ್ರಿವೆಂಟಿವ್ ಆಫೀಸರ್ ಜನಾರ್ದನನ್ ಕೆ.ಎ., ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಮುಹಮ್ಮದ್ ಇಜಾಸ್, ನಿಶಾದ್ ಪಿ. ನಾಯರ್, ಸಬಿತ್‌ಲಾಲ್, ಚಾಲಕ ಸತ್ಯನ್ ಇ.ಕೆ. ಎಂಬವರನ್ನೊಳಗೊಂಡ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ತಂಬಾಕು ಉತ್ಪನ್ನ ವಶಪಡಿಸಲಾಗಿದೆ. ಕಳೆದ  ಒಂದು ತಿಂಗಳಲ್ಲಿ ೫ ಕಾರುಗಳಲ್ಲಿ ಸಾಗಿಸುತ್ತಿದ್ದ ಸುಮಾರು ೯೦೦ ಕಿಲೋ ತಂಬಾಕು ಉತ್ಪನ್ನಗಳನ್ನು ಮಂಜೇಶ್ವರ ಚೆಕ್‌ಪೋಸ್ಟ್‌ನಲ್ಲಿ ವಶಪಡಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page