ಕಾರಿನಲ್ಲಿ ಸಾಗಿಸುತ್ತಿದ್ದ ಗಾಂಜಾ ಸಹಿತ ಇಬ್ಬರ ಸೆರೆ
ಬದಿಯಡ್ಕ: ಕಾರಿನಲ್ಲಿ ಸಾಗಿಸುತ್ತಿದ್ದ ಗಾಂಜಾ ಸಹಿತ ಇಬ್ಬರನ್ನು ಸೆರೆ ಹಿಡಿಯಲಾಗಿದೆ. ಕುಂಬ್ಡಾಜೆ ಉಬ್ರಂಗಳ ಕರುವತ್ತಡ್ಕ ನಿವಾಸಿ ಅಬ್ದುಲ್ ಬಶೀರ್ (29), ಕೋಡಿಮೂಲೆ ಹೌಸ್‌ನ ಅಬ್ದುಲ್ ಸಮದ್ (21) ಎಂಬಿವರನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಕುಂಬ್ಡಾಜೆ ಎಪಿ ಸರ್ಕಲ್‌ನಲ್ಲಿ ನಿನ್ನೆ ಸಂಜೆ ಎಸ್‌ಐ ಸುಮೇಶ್ ಬಾಬು ನೇತೃತ್ವ ದಲ್ಲಿ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿ ದಾಗ 47.700 ಗ್ರಾಂ ಗಾಂಜಾ ಪತ್ತೆಯಾಗಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಾರು ಹಾಗೂ ಗಾಂಜಾವನ್ನು ವಶಕ್ಕೆ ತೆಗೆದ ಬಳಿಕ ಆರೋಪಿಗಳನ್ನು ನೋಟೀಸ್ ನೀಡಿ ಬಿಡುಗಡೆಗೊ ಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.