ಕಾರು ಅಪಘಾತದಲ್ಲಿ ಗಾಯಗೊಂಡ: ಯುವಕ ಚಿಕಿತ್ಸೆ ಮಧ್ಯೆ ಮೃತ್ಯು

ಪೆರ್ಲ: ಕಾರು ಅಪಘಾತ ಕ್ಕೀಡಾಗಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟ ದಾರುಣ ಘಟನೆ ನಡೆದಿದೆ.  ಮಣಿಯಂಪಾರೆ ಮನ್ನಂಗಳದ ಜಾನು ನಾಯ್ಕ್ ಎಂಬವರ ಪುತ್ರ ರೋಶನ್ ಎನ್.ಜೆ (೨೯) ಮೃತಪಟ್ಟ ದುರ್ದೈವಿಯಾಗಿದ್ದಾರೆ.  ಬೆಂಗಳೂರು ಕೇಂದ್ರೀಕರಿಸಿ ಕಾರ್ಯಾಚರಿಸುವ ಖಾಸಗಿ ಸಂಸ್ಥೆಯೊಂದರ ನೌಕರನಾಗಿ ರೋಶನ್ ದುಡಿಯುತ್ತಿದ್ದರು. ಮೊನ್ನೆ ರಾತ್ರಿ ಮಂಗಳೂರಿನಿಂದ ಇವರು ಮನೆಗೆ ಕಾರಿನಲ್ಲಿ ಮರಳುತ್ತಿದ್ದಾಗ ೧೨ ಗಂಟೆ ಹೊತ್ತಿಗೆ ಅಡ್ಕಸ್ಥಳದಲ್ಲಿ ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿದ ಕಾರು ಡಿವೈಡರ್‌ಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದು ಇವರು ಗಂಭೀರ ಗಾಯಗೊಂಡಿದ್ದರು.  ಆ ರಸ್ತೆಯಲ್ಲಿ ಬಂದ ಇತರ ವಾಹನ ಪ್ರಯಾಣಿಕರು ಇವರನ್ನು ಆಸ್ಪತ್ರೆಗೆ ತಲುಪಿಸಿದ್ದರು. ಚಿಕಿತ್ಸೆ ಫಲಕಾರಿಯಾ ಗದೆ ನಿನ್ನೆ ರಾತ್ರಿ ಇವರು ಮೃತಪಟ್ಟರು.

ಮೃತರು ತಂದೆ, ತಾಯಿ ಸರಸ್ವತಿ, ಪತ್ನಿ ಸಂಧ್ಯಾಶ್ರೀ, ಪುತ್ರಿ ವಿಹಾ ರೋಶನ್, ಸಹೋದರರಾದ ರವೀನ, ರಜೀಶ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವೆ ಸಹೋದರಿ ರಾಜೇಶ್ವರಿ ವರ್ಷಗಳ ಹಿಂದೆ ಸಂಭವಿಸಿದ ವಾಹನ ಅಪಘಾತದಲ್ಲಿ  ಮೃತಪಟ್ಟಿದ್ದಾರೆ.

You cannot copy contents of this page