ಕಾರು-ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ : ಐವರು ವೈದ್ಯಕೀಯ ವಿದ್ಯಾರ್ಥಿಗಳ ದಾರುಣ ಮೃತ್ಯು: 6 ಮಂದಿ ಗಂಭೀರ
ಆಲಪ್ಪುಳ: ಇಲ್ಲಿನ ಕಳರ್ಕೋಡು ಚೆಂಗನಾಶ್ಶೇರಿ ತಿರುವಿನಲ್ಲಿ ನಿನ್ನೆ ರಾತ್ರಿ ಸುಮಾರು 9.30ಕ್ಕೆ ಕೆಎಸ್ಆರ್ಟಿಸಿ ಬಸ್ ಮತ್ತು ಕಾರು ಢಿಕ್ಕಿ ಹೊಡೆದ ಪರಿಣಾಮ ಐವರು ವೈದ್ಯಕೀಯ ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ ಆರು ಮಂದಿ ಗಂಭೀರ ಗಾಯಗೊಂಡ ಭೀಕರ ಘಟನೆ ನಡೆದಿದೆ.
ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರು ಬಸ್ಸಿಗೆ ಮುಖಾಮುಖಿಯಾಗಿ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ವಿದ್ಯಾರ್ಥಿಗಳಲ್ಲದೆ ಬಸ್ಸಿನಲ್ಲಿದ್ದ ಹಲವರು ಪ್ರಯಾಣಿಕರೂ ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ಕೋಟಯA ಪೂಂuಟಿಜeಜಿiಟಿeಜರ್ ಚೆನ್ನಾಡಿನ ಆಯುಷ್ ಶಾಜಿ (19), ಪಾಲಕ್ಕಾಟ ಕಾವು ಸ್ಟ್ರೀಟ್ನ ಕೆ.ಡಿ. ಶ್ರೀದೀಪ್ ವಸಂತನ್ (19), ಮಲಪ್ಪುರಂ ಕೋಟಕ್ಕಲ್ ಚಿನಂಪುತ್ತೂರಿನ ಬಿ. ದೇವಾನಂದನ್ (19), ಕಣ್ಣೂರು ವೆಂಙರ ಮಾಡಾಯಿ ಮುಟ್ಟಂನ ಮುಹಮ್ಮದ್ ಅಬ್ದುಲ್ ಜಬ್ಬಾರ್ (19), ಲಕ್ಷದ್ವೀಪ್ ಆಂದ್ರಾಯತ್ನ ಮುಹಮ್ಮದ್ ಇಬ್ರಾಹಿಂ (19) ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.
ಇವರ ಹೊರತಾಗಿ ಪುದು ಕುರಶ್ಶಿಯ ಶೈನ್ ಡೈಸನ್ (19) ಎಡಪ್ಪರ ಅಲ್ವಿನ್ ಜೋರ್ಜ್ (19), ಮಲಪ್ಪುರಂ ಮಣಪ್ಪುರದ ಕೃಷ್ಣದೇವ್ (19), ಎರ್ನಾಕುಳಂ ಕಣ್ಣನ್ಕುಳದ ಗೌರೀ ಶಂಕರ್ (19), ಕೊಲ್ಲಂ ಚಿವರದ ಮುಹಸ್ಸಿನ್ ಮುಹಮ್ಮದ್ (19), ಕೊಲ್ಲಂ ಚೆರುವಳಿಯ ಆನಂದ್ ಮನು (19) ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಮಡಿದವರು ಹಾಗೂ ಗಾಯಗೊಂಡವರು ಆಲಪ್ಪುಳ ವೈದ್ಯಕೀಯ ಕಾಲೇಜಿನ ಪ್ರಥಮ ವರ್ಷ ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳಾ ಗಿದ್ದಾರೆ. ಇವರು ಆಲಪ್ಪುಳದಲ್ಲಿ ಸಿನೆಮಾ ಥಿಯೇಟರ್ಗೆ ಸಿನೆಮಾ ಕಾಣಲೆಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿ 11 ವಿದ್ಯಾರ್ಥಿಗಳಿದ್ದರು.