ಕಾರು ಕೆರೆಗೆ ಬಿದ್ದು ವಿದ್ಯಾರ್ಥಿ ಸಾವು
ಕಣ್ಣೂರು: ಕಾರು ಕೆರೆಗೆ ಬಿದ್ದು ವಿದ್ಯಾರ್ಥಿ ಮೃತಪಟ್ಟ ಘಟನೆ ಕಣ್ಣೂರು ಅಂಙಡಿಕಡವು ಎಂಬಲ್ಲಿ ಇಂದು ಮುಂಜಾನೆ ನಡೆದಿದೆ.
ಅಂಙಡಿಕಡವಿನ ಇಮ್ಮಾನು ವಲ್ ಎಂಬಾತ ಮೃತಪಟ್ಟ ದುರ್ದೈವಿ. ರಸ್ತೆಯಲ್ಲಿ ಮರದ ರೆಂಬೆ ಬಿದ್ದಿರುವುದನ್ನು ಕಂಡ ಇಮ್ಮಾನುವಲ್ ತಕ್ಷಣ ಕಾರನ್ನು ಬದಿಗೆ ಸರಿಸಿದ್ದಾರೆ.
ಈ ವೇಳೆ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ತೆಂಗಿನ ಮರಕ್ಕೆ ಬಡಿದು ಸಮೀಪದ ಕೆರೆಗೆ ಬಿದ್ದಿದೆ. ಕೂಡಲೇ ಅಲ್ಲಿಗೆ ತಲುಪಿದ ನಾಗರಿಕರು ಇಮ್ಮಾನುವಲ್‌ನನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ತಲುಪಿಸಿ ದರೂ ಜೀವ ರಕ್ಷಿಸಲಾಗಲಿಲ್ಲ. ತೃಶೂರಿನಲ್ಲಿ ವಿದ್ಯಾರ್ಥಿಯಾಗಿದ್ದ ಇಮ್ಮಾನುವಲ್ ಮನೆಗೆ ಮರಳು ತ್ತಿದ್ದಾಗ ಅಪಘಾತವುಂಟಾಗಿದೆ.