ಕಾರು-ಬಸ್ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಯುವಕ ಮೃತ್ಯು

 ಮಂಜೇಶ್ವರ:  ಕಾರು ಮತ್ತು ಬಸ್ ಮಧ್ಯೆ ಉಂಟಾದ ಅಪಘಾತ ದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮೃತಪಟ್ಟ ಘಟನೆ ನಡೆದಿದೆ. ವರ್ಕಾಡಿ  ಬಳಿಯ ತೋಕೆ ನಿವಾಸಿ ಸಿಪ್ರಿಯನ್ ಡಿ’ಸೋಜಾರ ಪುತ್ರ ಕೆಲ್ವಿನ್ ಡಿ’ಸೋಜಾ (18)  ನಿನ್ನೆ ಮುಂಜಾನೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ತೋಕೆ ನಿವಾಸಿಗಳಾದ ಪ್ರಜ್ವಲ್ (24), ಪ್ರೀತಂ (19) ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ.  ಮೇ 30ರಂದು ಬೆಳಿಗ್ಗೆ ಈ ಮೂರು ಮಂದಿ ಕಾರಿನಲ್ಲಿ  ಮಂಜೇಶ್ವರದಿಂದ ಹೊಸಂಗಡಿಯತ್ತ ತೆರಳುತ್ತಿದ್ದಾಗ ಮಂಜೇಶ್ವರ ಸಮೀಪದ ಪೊಸೋಟ್ ಸರ್ವೀಸ್ ರಸ್ತೆಯಲ್ಲಿ ತಲಪಾಡಿ ಭಾಗಕ್ಕೆ ತೆರಳುತ್ತಿದ್ದಾಗ ಖಾಸಗಿ ಬಸ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ಬಗ್ಗೆ ಮಂಜೇಶ್ವರ ಪೊಲೀಸರು  ಪ್ರಕರಣ ದಾಖಲಿಸಿದ್ದಾರೆ. ನಿನ್ನೆ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ  ಮೃತದೇಹ ವನ್ನು ವರ್ಕಾಡಿ ಚರ್ಚ್ ವಠಾರದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ಮೃತರು ತಂದೆ, ತಾಯಿ ಪ್ರಸಿಲ್ಲ ಡಿ’ಸೋಜಾ, ಸಹೋದರಿ ಕ್ರಿಶಾಲ್ ಡಿ’ಸೋಜಾ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

RELATED NEWS

You cannot copy contents of this page