ಕಾವುಗೋಳಿ ಕಡಪ್ಪುರದಲ್ಲಿ ಕಡಲ್ಕೊರೆತ: ಸೂಕ್ತ ಕ್ರಮ ಕೈಗೊಳ್ಳಬೇಕು-ಬಿಜೆಪಿ ಒತ್ತಾಯ
ಕಾಸರಗೋಡು: ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್‌ನ ಕಾವುಗೋಳಿ ಕಡಪ್ಪುರದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಇದರ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಒತ್ತಾಯಿಸಿದೆ.
200ರಷ್ಟು ಮೀನು ಕಾರ್ಮಿಕರ ಕುಟುಂಬಗಳು ವಾಸಿಸುವ ಈ ಪ್ರದೇಶದ ಜನರಿಗೆ ಮುಖ್ಯ ರಸ್ತೆಗೆ ತಲುಪಲು ಸರಿಯಾದ ದಾರಿಯಿಲ್ಲ. ಯಾರಿಗಾ ದರೂ ಆರೋಗ್ಯ ಸಮಸ್ಯೆಉಂಟಾದಲ್ಲಿ ಅಥವಾ ತುರ್ತು ಸಂದರ್ಭದಲ್ಲಿ ಚೇರಂಗೈ ರಸ್ತೆಯನ್ನು ಆಶ್ರಯಿಸಬೇಕಾ ಗುತ್ತಿದೆ. ಆದರೆ ಕಡಲ್ಕೊರೆತದಿಂದ ಈ ಏಕೈಕ ರಸ್ತೆಯೂ ಬೆದರಿಕೆ ಎದುರಿಸುತ್ತಿದೆ. ಕಳೆದ ಹಲವು ವರ್ಷಗಳಿಂದ ಈ ಪ್ರದೇಶದ ಜನತೆ ಎದುರಿಸುವ ಈ ಸಮಸ್ಯೆಗೆ ಇದುವರೆಗೆ ಪರಿಹಾರ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಸಂಪರ್ಕಿಸಿದರೂ ಅವರ‍್ಯಾರೂ ಗಮನ ಹರಿಸುತ್ತಿಲ್ಲ. ಇದರ ವಿರುದ್ದ ತೀವ್ರ ಚಳವಳಿ ನಡೆಸಬೇಕಾಗಿ ಬರಲಿದೆಯೆಂದು ಬಿಜೆಪಿ ಮೊಗ್ರಾಲ್ ಪುತ್ತೂರು ಪಂಚಾಯತ್ ಸಮಿತಿ ಅಧ್ಯಕ್ಷ ಸಂಪತ್ತ್, ಪಂಚಾಯತ್ ಸದಸ್ಯೆ ಮಲ್ಲಿಕಾ ಪ್ರಭಾಕರ್ ತಿಳಿಸಿದ್ದಾರೆ.