ಕಾಸರಗೋಡಿಗೆ ಉತ್ತಮ ಜಿಲ್ಲಾಡಳಿತಕ್ಕಿರುವ ಪುರಸ್ಕಾರ
ಕಾಸರಗೋಡು: ಭಿನ್ನ ಸಾಮರ್ಥ್ಯ ವಲಯದಲ್ಲಿ ಉತ್ತಮ ಚಟುವಟಿಕೆ ಗಳನ್ನು ನಡೆಸಿರುವುದಕ್ಕೆ ಸಾಮಾಜಿಕ ನೀತಿ ಇಲಾಖೆ ಏರ್ಪಡಿಸಿದ ರಾಜ್ಯ ಭಿನ್ನ ಸಾಮರ್ಥ್ಯ ಪುರಸ್ಕಾರ ಕಾಸರಗೋಡು ಜಿಲ್ಲಾಡಳಿತಕ್ಕೆ ಲಭಿಸಿದೆ. ಎಂಡೋಸಲ್ಫಾನ್ ಸಂತ್ರಸ್ತರಿಗೆ ಸಹಿತ ಭಿನ್ನ ಸಾಮರ್ಥ್ಯ ವಲಯದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳು ಜಿಲ್ಲಾಡಳಿತದೊಂ ದಿಗೆ ಸೇರಿ ನಡೆಸಿದ ಚಟುವಟಿಕೆಗಳಿಗಿ ರುವ ಅಂಗೀಕಾರ ವಾಗಿದೆ ಈ ಪುರಸ್ಕಾರ. ಸಚಿವೆ ಆರ್. ಬಿಂದು ಒಂದು ಲಕ್ಷ ರೂ.ಗಳ ಪುರಸ್ಕಾರ ಘೋಷಿಸಿದ್ದಾರೆ. ಎಂಡೋಸ ಲ್ಫಾನ್ ಸಂತ್ರಸ್ತ ಬಾಧಿತ ವಲಯವಾದ ಭಿನ್ನ ಸಾಮರ್ಥ್ಯದವರಿಗೆ ಅವರ ಹೆತ್ತವ ರಿಗೂ ಸಹಿತ ಜೀವನ ಮಾರ್ಗಗಳನ್ನು ಕಂಡುಕೊಳ್ಳಲಿರುವ ಜಿಲ್ಲಾಡಳಿತದ ಐಲೀಡ್ ಯೋಜನೆ ಸಹಿತದ ಕಾರ್ಯ ಗಳು ಪುರಸ್ಕಾರಕ್ಕೆ ಪರಿಗಣಿಸಲಾಗಿದೆ.
ಪೆರಿಯ ಎಂ.ಸಿ.ಆರ್.ಸಿಯಲ್ಲಿ ಕೈಮಗ್ಗ ಉತ್ಪನ್ನ ನಿರ್ಮಾಣ ಘಟಕ, ಮುಳಿಯಾರಿನಲ್ಲಿ ನೋಟುಬುಕ್ ನಿರ್ಮಾಣ ಘಟಕ ಈಗಾಗಲೇ ಚಟುವಟಿಕೆ ಆರಂಭಿಸಿದೆ. ಬಡ್ಸ್ ಶಾಲೆಗಳಲ್ಲಿ ಪ್ರತ್ಯೇಕ ಸೌಕರ್ಯಗಳನ್ನು ಸಿದ್ಧಪಡಿಸಿ ಮಾದರಿ ಪುನರ್ವಸತಿ ಕೇಂದ್ರಗಳಾಗಿ ಅಭಿವೃದ್ಧಿಗೊಳಿಸುವುದಕ್ಕೆ ಈ ಕಾಲಾವಧಿಯಲ್ಲಿ ಸಾಧ್ಯವಾಗಿದೆ.
ಭಿನ್ನಸಾಮರ್ಥ್ಯದವರು ಅವರ ಹೆತ್ತ ವರು ನಿರ್ಮಿಸುವ ಉತ್ಪನ್ನಗಳನ್ನು ಮಾರಾಟ ಮಾಡಲು ಜಿಲ್ಲಾ ಮಟ್ಟದಲ್ಲಿ ಸಹಕಾರಿ ಸೊಸೈಟಿಯೊಂದನ್ನು ಆರಂ ಭಿಸಲಾಗು ವುದೆಂದು ಈ ವೇಳೆ ಜಿಲ್ಲಾಧಿಕಾರಿ ಕೆ. ಇಂಬಶೇಖರ್ ತಿಳಿಸಿದ್ದಾರೆ. ಈ ಉತ್ಪನ್ನ ಗಳಿಗೆ ದೇಶದೊಳಗೆ ಹಾಗೂ ಹೊರಗೆ ಮಾರುಕಟ್ಟೆಯನ್ನು ಕಂಡು ಕೊಳ್ಳಲು ಉದ್ದೇಶಿಸಲಾಗಿದೆ. ಸರಕಾರದ ಈ ಪುರಸ್ಕಾರ ಈ ವಿಷಯಗಳಿಗೆ ಬಲ ನೀಡ ಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.