ಕಾಸರಗೋಡಿನಲ್ಲಿ ರಕ್ತದಾನ ಶಿಬಿರ
ಕಾಸರಗೋಡು: ಕೇರಳ ಸ್ಟೇಟ್ ಬ್ಲಡ್ ಟ್ರಾನ್ಸ್‌ಲೇಷನ್ ಕಾಸರಗೋಡು ಜಿಲ್ಲಾ ಕೌನ್ಸಿಲ್ ಹಾಗೂ ಕಿಮ್ಸ್ ಆಸ್ಪತ್ರೆ ಸಂಯುಕ್ತವಾಗಿ ರಕ್ತದಾನ ಶಿಬಿರ ನಡೆಸಿತು. ಕರಂದಕ್ಕಾಡ್ ಅಶ್ವಿನಿನಗರದಲ್ಲಿರುವ ಕಾಸರಗೋಡು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ಹಾಸ್ಪಿಟಲ್‌ನಲ್ಲಿ ನಡೆದ ಶಿಬಿರವನ್ನು ಕಾಸರಗೋಡು ಸರ್ಕಲ್ ಇನ್ಸ್‌ಪೆಕ್ಟರ್ ನಳಿನಾಕ್ಷನ್ ಉದ್ಘಾಟಿಸಿದರು.
೫೦ರಷ್ಟು ಮಂದಿ ರಕ್ತದಾನ ಮಾಡಿದರು. ಕಾಸರಗೋಡು ಜಿಲ್ಲಾ ಬ್ಲಡ್ ಬ್ಯಾಂಕ್ ಮೆಡಿಕಲ್ ಆಫೀಸರ್ ಡಾ| ಸೌಮ್ಯ ರಕ್ತದಾನದ ಪ್ರಾಧಾನ್ಯತೆ ಕುರಿತು ವಿವರಿಸಿದರು. ಕಿಮ್ಸ್ ಎಡ್ಮಿನಿಸ್ಟ್ರೇಟಿವ್ ರಾಜೇಶ್ವರಿ ಅಧ್ಯಕ್ಷತೆ ವಹಿಸಿದರು. ಡಾ| ನವಾಸ್, ಆಪರೇಶನ್ ಮೆನೇಜರ್ ಟಿಜೊ ಮಾತನಾಡಿದರು. ಕಿಮ್ಸ್ ಮಾರ್ಕೆಟಿಂಗ್ ಮೆನೇಜರ್ ಶ್ರೀಕಾಂತ್, ಪಿಆರ್‌ಒ ಸಿದ್ದಿಕ್ ಚೇರಂಗೈ, ಮುಜೀಬ್ ರಹಮಾನ್, ಬಿನೋಯ್ ಥೋಮಸ್ ಶಿಬಿರಕ್ಕೆ ನೇತೃತ್ವ ನೀಡಿದರು.