ಕಾಸರಗೋಡಿನ ಸಾತ್ವಿಕ್ ರೈ ಭೂ ಸೇನೆಗೆ ಲೆಫ್ಟಿನೆಂಟ್ ಆಗಿ ನೇರ ನೇಮಕಾತಿ
ಕಾಸರಗೋಡು: ಕಾಸರಗೋಡು ನಿವಾಸಿ ಸಾತ್ವಿಕ್ ಎಸ್ ರೈ ಭಾರತೀಯ ಭೂ ಸೇನೆಯಲ್ಲಿ ಲೆಫ್ಟ್ಯಿನೆಂಟ್ ಆಗಿ ನೇರ ನೇಮಕಾತಿ ಮೂಲಕ ಆಯ್ಕೆಗೊಂಡಿದ್ದಾರೆ.ಜೂನ್ 8 ರಂದು ಗಯಾ ಬಿಹಾರದ ಆಫೀಸರ್ ರ್ಟ್ರೈನಿಂಗ್ ಅಕಾಡೆಮಿಯಲ್ಲಿ 5 ವರ್ಷ ಕಾಲ ಕಠಿಣ ತರಬೇತಿಯ ಬಳಿಕ ಭೂ ಸೇನೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರಿಂದ ಭೂ ಸೇನೆಯ ಈ ಪ್ರಮುಖ ಹುದ್ದೆಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಾತ್ವಿಕ್ ರೈಯ ಹೆತ್ತವರಾದ ಹಿರಿಯ ನ್ಯಾಯವಾದಿ, ಜಿಲ್ಲಾ ಬಂಟರ ಸಂಘದ ಮಾಜಿ ಅಧ್ಯಕ್ಷ ಸದಾನಂದ ರೈ, ಚಿನ್ಮಯ ವಿದ್ಯಾಲಯದ ಇಂಗ್ಲಿಷ್ ಪ್ರಾದ್ಯಾಪಕಿ ಶರಣ್ಯ ಎಸ್ ರೈ, ಸಹೋದರ ರಿತ್ವಿಕ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಲೆಫ್ಟ್ಯಿನೆಂಟ್ ಸಾತ್ವಿಕ್ ರೈ ಅವರು ಎಲ್ ಕೆ ಜಿ ಮತ್ತು ಯು ಕೆ ಜಿ ಯನ್ನು ಕಾಸರಗೋಡು ಚೈತನ್ಯ ವಿದ್ಯಾಲಯದಲ್ಲಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕಾಸರಗೋಡು ಚಿನ್ಮಯ ವಿದ್ಯಾಲಯದಲ್ಲಿ ಮತ್ತು ಪದವಿಪೂರ್ವ ವಿದ್ಯಾಭ್ಯಾಸವನ್ನು ಮೂಡಬಿದಿ ರೆ ಆಳ್ವಾಸ್‌ನಲ್ಲಿ ಮುಗಿಸಿ ಗಯಾ ಬಿಹಾರದ ಮಿಲಿಟರಿ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಗೆ ಸೇರಿಕೊಂಡರು. ತರಬೇತಿಯೊಂದಿಗೆ ಇಂಜಿನಿಯರಿAಗ್ ಬಿ. ಟೆಕ್ ಇಲೆಕ್ಟ್ರಾನಿಕ್ ಮತ್ತು ಮೆಕಾನಿಕಲ್ ಇಂಜಿನಿಯರಿAಗ್ ಪದವಿ ಪಡೆದು ನೇರ ನೇಮಕಾತಿ ಮೂಲಕಸೇನೆಯ ಲೆಫ್ಟ್ಯಿನೆಂಟ್ ಹುದ್ದೆಯನ್ನು ವಹಿಸಿಕೊಂಡರು. ಕಾಸರಗೋಡಿಗೆ ಆಗಮಿಸಿದ ಇವರನ್ನು ವಿವಿಧ ಸಂಘ ಸಂಸ್ಥೆಗಳು, ಅಭಿಮಾನಿಗಳು ಅಭಿನಂದಿಸಿದ್ದಾರೆ. ಇವರು ಸೇನೆಯ ಎಲ್ಲಾ ದೈಹಿಕ ಹಾಗೂ ಭೌದ್ಧಿಕ ಪರೀಕ್ಷೆಗಳಲ್ಲಿ ಮೊದಲ ಪ್ರಯತ್ನದಲ್ಲೇ ತೇರ್ಗಡೆ ಗೊಂಡು ಅಧಿಕಾರಿಗಳ ಮೆಚ್ಚುಗೆಗೆ ಪಾತ್ರ ರಾಗಿದ್ದಾರೆ. ಪ್ರತಿಭಾವಂತ ಕ್ರೀಡಾ ಪಟು ಕೂಡ ಆಗಿರುವ ಸಾತ್ವಿಕ್ ರೈ ತನ್ನ ಸಾಧನೆಗಳಿಗೆ ಹೆತ್ತವರ ಪ್ರೋತ್ಸಾಹ ಕಾರಣವೆಂದು ಹೇಳುತ್ತಾರೆ.