ಕಾಸರಗೋಡು ಜಿಲ್ಲೆ ನಿವಾಸಿ ಶಾರ್ಜಾದಲ್ಲಿ ವಾಹನ ಢಿಕ್ಕಿ ಹೊಡೆದು ಮೃತ್ಯು

ಕಾಸರಗೋಡು: ಶಾರ್ಜಾದಲ್ಲಿ ನಿನ್ನೆ ಸಂಭವಿಸಿದ ಅಪಘಾತದಲ್ಲಿ ಕಾಸರಗೋಡು ಜಿಲ್ಲೆಯ ಮೀತಲ್ ಮವ್ವಲ್ ನಿವಾಸಿ ಹಾಗೂ ಶಾರ್ಜಾ ದೈದ್ ರಸ್ತೆ ೯ನೇ ನಂಬ್ರ ಸೇತುವೆ ಸಮೀಪ ಸೂಪರ್ ಮಾರ್ಕೆಟ್ ಮಾಲಕನಾದ ಇಬ್ರಾಹಿಂ (50) ಮೃತಪಟ್ಟರು. ಸೂಪರ್ ಮಾರ್ಕೆಟ್‌ನಿಂದ ರಸ್ತೆಯ ಎದುರು ಭಾಗದಲ್ಲಿರುವ ಇಲೆಕ್ಟ್ರಿಸಿಟಿ ಕಚೇರಿಗೆ ವಿದ್ಯುತ್ ಬಿಲ್ ಪಾವತಿಸಲು ರಸ್ತೆ ಅಡ್ಡ ದಾಟುತ್ತಿದ್ದ ಮಧ್ಯೆ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಢಿಕ್ಕಿಯ ಆಘಾತದಲ್ಲಿ ಎಸೆಯಲ್ಪಟ್ಟ ಇಬ್ರಾಹಿಂ ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಳೆದ ೩೫ ವರ್ಷದಿಂದ ಇವರು ಶಾರ್ಜಾದಲ್ಲಿ ಸೂಪರ್ ಮಾರ್ಕೆಟ್ ಹೊಂದಿದ್ದಾರೆ. ನಿನ್ನೆ ರಾತ್ರಿಯೇ ಮೃತದೇಹವನ್ನು ಊರಿಗೆ ತರಲಿರುವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೀತಲ್ ಮೌವ್ವಲ್‌ನ ದಿ| ಮುಕ್ರಿ ಮೊದುರ ಪುತ್ರನಾಗಿದ್ದಾರೆ. ಮೃತರು ತಾಯಿ ಆಯಿಷಾ, ಪತ್ನಿ ಆಬಿದಾ, ಮಕ್ಕಳಾದ ಇರ್ಫಾನ್, ಇಫ್ರಾ, ಅಸೀಂ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page