ಕುಂಜಾರು ನಿವಾಸಿ ಮುಂಬೈಯಲ್ಲಿ ಬಸ್ ಢಿಕ್ಕಿ ಹೊಡೆದು ಮೃತ್ಯು
ಕಾಸರಗೋಡು: ಮಧೂರು ಬಳಿಯ ಕುಂಜಾರು ವೆಳುಂಬು ಎಂಬಲ್ಲಿನ ಕೆ. ಅಸೈನಾರ್ (55) ಮುಂಬೈಯಲ್ಲಿ ಬಸ್ ಢಿಕ್ಕಿ ಹೊಡೆದು ಮೃತಪಟ್ಟರು. ನಿನ್ನೆ ಸಂಜೆ 3 ಗಂಟೆ ವೇಳೆ ಮುಂಬೈ ವಿ.ಟಿ. ಶಿವಾಲಯ ರೆಸ್ಟಾರೆಂಟ್ ಮುಂದೆ ಅಪಘಾತ ಸಂಭವಿಸಿದೆ. ರಸ್ತೆ ಅಡ್ಡ ದಾಟುತ್ತಿದ್ದ ಇವರಿಗೆ ಬಿಎಸ್‌ಟಿ ಬಸ್ ಢಿಕ್ಕಿ ಹೊಡೆದಿತ್ತು. ಬಸ್‌ನ ಹಿಂಬದಿ ಚಕ್ರ ಇವರ ದೇಹದ ಮೇಲೆ ಹರಿದ ಪರಿಣಾಮ ಗಂಭೀರ ಗಾಯಗೊಂಡು ತಕ್ಷಣ ಮೃತಪಟ್ಟರು. ಮೃತದೇಹ ವನ್ನು ಮುಂಬೈ ಸೈಂಟ್ ಜೋರ್ಜ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಮುಂಬೈ ಕೇರಳ ಮುಸ್ಲಿಂ ಜಮಾಯತ್ ಮಾಜಿ ಕಾರ್ಯದರ್ಶಿ ಹನೀಫ್ ಹಾಗೂ ಮುಂಬೈ ಕಾಸರಗೋಡು ಒಕ್ಕೂಟದ ನೇತೃತ್ವದಲ್ಲಿ ಮೃತ ದೇಹವನ್ನು ಊರಿಗೆ ತಲುಪಿಸಲು ಪ್ರಯತ್ನ ನಡೆಯುತ್ತಿದೆ.
ಅಸೈನಾರ್ ನಿನ್ನೆ ಬೆಳಿಗ್ಗೆ ಮುಂಬೈಗೆ ತಲುಪಿದ್ದರು. ಕುಂಜಾರು ವೆಳುಂಬದ ಅಂದುಂಞಿ ಹಾಗೂ ಬೀಫಾತ್ತಿಮ್ಮರ ಪುತ್ರನಾದ ಮೃತರು ಸಹೋದರ- ಸಹೋದರಿಯರಾದ ಅಬ್ಬಾಸ್, ಮುಹಮ್ಮದ್ ಕುಂಞಿ, ಅಬ್ದುರಹ್ಮಾನ್, ಅಹ್ದುಲ್ ಖಾದರ್, ನೌಶಾದ್, ಮರಿಯಾಂಬಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.