ಕುಂಡುಕೊಳಕೆ ಬೀಚ್‌ನಲ್ಲಿ ಪ್ರವಾಸಿಗರಿಗೆ ವಿಶ್ರಾಂತಿ ಪಡೆಯಲು ಆಸನ ವ್ಯವಸ್ಥೆ

ಮಂಜೇಶ್ವರ : ಕುಂಡು ಕೊಳಕೆ ಬೀಚ್‌ಗೆ ಆಗಮಿಸುವ ಪ್ರವಾಸಿಗರಿಗೆ ಸಮುದ್ರದ ಸೌಂದರ್ಯವನ್ನು ಸವಿಯಲು ಕುಳಿತುಕೊಳ್ಳುವ ಆಸನ ಸ್ಥಾಪಿಸಲಾಯಿತು.
ಈ ಹೊಸ ಸೌಲಭ್ಯವು ಪ್ರವಾಸಿಗರಿಗೆ ಇನ್ನಷ್ಟು ಆಕರ್ಷಕ ಅನುಭವವನ್ನು ಒದಗಿಸಲಿದೆ. ಇದು ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಸಹಾಯಕವಾಗಲಿದೆ. ಮಂಜೇಶ್ವರ ಪಂಚಾಯತ್ 19ನೇ ವಾರ್ಡ್ ಸದಸ್ಯೆ ಮುಂತಾಸ್ ಸಮೀರರ ನೇತೃತ್ವದಲ್ಲಿ ವಿಶಾಲ ಮನಸ್ಕರ ಸಹಾಯದೊಂದಿಗೆ ನಿರ್ಮಿಸಲಾದ ಆಸನದ ಉದ್ಘಾಟನೆಯನ್ನು ಶಾಸಕ ಎ.ಕೆ.ಎಂ. ಅಶ್ರಫ್ ನೆರವೇರಿಸಿದರು. ಮುಂತಾಸ್ ಸಮೀರ ನೇತೃತ್ವದಲ್ಲಿ ಬೀಚ್ ಪ್ರದೇಶವನ್ನು ಇನ್ನಷ್ಟು ಸುಂದರಗೊಳಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪಂಚಾಯತ್ ಅಧ್ಯಕ್ಷೆ ಜೀನ್ ಲವಿನ್ ಮೊಂತೆರೊ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮೊಹಮ್ಮದ್ ಸಿದ್ದೀಖ್, ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಯಾದವ್ ಬಡಾಜೆ, ರಾಧಾ, ಸಾಮಾಜಿಕ ಕಾರ್ಯಕರ್ತ ಇಲ್ಯಾಸ್ ತೂಮಿನಾಡು, ಪಂಚಾಯತ್ ಸದಸ್ಯರು ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡರು.

RELATED NEWS

You cannot copy contents of this page